ಹುಬ್ಬಳ್ಳಿ :ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರದಿದೆ. ಹುಬ್ಬಳ್ಳಿಯ ಘಂಟಿಕೆರೆಯಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ನವೀನ್ (27) ಕೊಲೆಗೀಡಾದ ಯುವಕ.
ಹುಬ್ಬಳ್ಳಿಯ ಬಂಕಾಪುರ ಚೌಕ್ದ ನಿವಾಸಿಯಾದ ಈತ ಅಂದುಕೊಂಡಂತೆ ನಡೆದಿದ್ದರೇ ಹಸೆಮಣೆ ಏರಬೇಕಿತ್ತು. ಇತ್ತೀಚೆಗಷ್ಟೇ ಬದುಕಿಗೊಂದು ಉದ್ಯೋಗ ಅಂತಾ ಹುಡುಕಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಶನಿವಾರ ರಾತ್ರಿ ಮೂವರು ಪುಡಿ ರೌಡಿಗಳ ಗ್ಯಾಂಗ್ವೊಂದು ನವೀನ್ ಮೇಲೆ ಅಟ್ಯಾಕ್ ಮಾಡಿದೆ. ತೆಲೆ ಮೇಲೆ ಇಟ್ಟಿಗೆ ಹಾಗೂ ದೊಣ್ಣೆಗಳಿಂದ ಹಲ್ಲೆ ಮಾಡಿದೆ. ತೀವ್ರವಾಗಿ ಗಾಯಗೊಂಡಿದ್ದ ನವೀನ್ ಅವರನ್ನು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾರೆ.
ಕೊಲೆಯ ಹಿಂದನ ಸತ್ಯ ನಿಗೂಢ :ಸಾವಿನ ಹಿಂದಿನ ಅಸಲಿ ಸತ್ಯ ಮಾತ್ರ ಇನ್ನೂ ಪೊಲೀಸರಿಗೆ ನಿಗೂಢವಾಗಿದೆ. ಶನಿವಾರ ಎಂದಿನಂತೆ ಘಂಟಿಕೇರಿಯ ಬಾರ್ವೊಂದರಲ್ಲಿ ಮದ್ಯ ಕುಡಿಯಲು ನವೀನ್ ತೆರಳಿದ್ದರು. ಪ್ರತಿದಿನ ನವೀನ್, ಮದ್ಯಪಾನ ಮಾಡಲು ಅದೇ ಬಾರ್ಗೆ ಬರೋದನ್ನು ಪುಡಿರೌಡಿಗಳು ಖಚಿತಪಡಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ನವೀನ್ ಕುಡಿದು ಇನ್ನೇನು ಬಾರ್ನಿಂದ ಮನೆ ಕಡೆಗೆ ಹೋಗಲು ಹೊರಬಂದಿದ್ದಾರಷ್ಟೇ.