ಹುಬ್ಬಳ್ಳಿ:ವಾಣಿಜ್ಯನಗರಿಯ ಹೈಪ್ರೊಫೈಲ್ ಮರ್ಡರ್ ಪ್ರಕರಣ ಕುರಿತು ದಿನಕ್ಕೊಂದು ರೋಚಕ ಸಂಗತಿ ಬಯಲಾಗ್ತಿದೆ. ಮಗನ ಕೊಲೆಗೆ ವರ್ಷದ ಹಿಂದೆಯೇ ಪ್ಲಾನ್ ಮಾಡಲಾಗಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಪುತ್ರನನ್ನು ಹಂತಕರ ಕೈಗೆ ಒಪ್ಪಿಸುವಾಗ ಕಿರಾತಕ ತಂದೆ ಆತನ ಮೈಮೇಲಿನ ಆಭರಣ, ವಾಚ್ ಪಡೆದುಕೊಂಡಿದ್ದರಂತೆ.
ಮಕ್ಕಳು ತಪ್ಪು ದಾರಿ ತುಳಿದಾಗ ಹೆತ್ತವರು ಬೈದು ಬುದ್ಧಿ ಹೇಳುವುದು ಸಾಮಾನ್ಯ. ಅದಕ್ಕೂ ಮಣಿಯದಿದ್ದಾಗ ಒಂದು ಹೆಜ್ಜೆ ಮುಂದೆ ಹೋಗಿ ನಾಲ್ಕು ಏಟು ಹಾಕುವುದುನ್ನು ನಾವು ನೋಡಿದ್ದೇವೆ. ಆದರೆ ಹುಬ್ಬಳ್ಳಿಯ ಈ ಉದ್ಯಮಿ ತಮ್ಮ ಪುತ್ರನ ವಿಚಾರಕ್ಕೆ ತೆಗೆದುಕೊಂಡು ನಿರ್ಧಾರ ಮಾತ್ರ ಘನಘೋರವಾಗಿದೆ.
ಉದ್ಯಮಿ ಭರತ್ ಜೈನ್ ತಮ್ಮ ಪುತ್ರನನ್ನು ಹಂತಕರ ಕೈಗೆ ಒಪ್ಪಿಸಿ ಬರುವಾಗ ಪುತ್ರ ಅಖಿಲ್ ಜೈನ್ ಮೈಮೇಲಿದ್ದ ಚಿನ್ನದ ಸರ, ಉಂಗುರ, ಕೈಯಲ್ಲಿದ್ದ ವಾಚ್ ಬಿಚ್ಚಿಸಿಕೊಂಡು ಬಂದಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ.
ಪೊಲೀಸ್ ವಿಚಾರಣೆ ವೇಳೆ ಸ್ವತಃ ಅಖಿಲ್ ಜೈನ್ ತಂದೆ ಭರತ್ ಜೈನ್ ಈ ಬಗ್ಗೆ ಬಾಯ್ಬಿಟ್ಟಿದ್ದಾರೆ. ಮಗ ಅಖಿಲ್ ಜೈನ್ ವ್ಯಕ್ತಿತ್ವ ಸರಿ ಇರಲಿಲ್ಲ ಎನ್ನುವುದು ತಂದೆ ಭರತ್ ಅವರ ಆರೋಪ. ಮಗನ ಕೊಲೆ ಮಾಡಿಸಲು ಭರತ್ ಒಂದು ವರ್ಷದ ಹಿಂದೆಯೇ ಯೋಜನೆ ರೂಪಿಸಿದ್ದರಂತೆ. ಸೂಕ್ತ ಸಮಯಕ್ಕಾಗಿ ಹೊಂಚು ಹಾಕಿ ಕುಳಿತಿದ್ದ. ಇದೇ ಸರಿಯಾದ ಸಮಯ ಎಂದು ಭಾವಿಸಿ ಹೆತ್ತು-ಹೊತ್ತು ಸಾಕಿ ಸಲುಹಿದ ಕೋಟ್ಯಾಧಿಪತಿ ತಂದೆ ತನ್ನ ಏಕಮಾತ್ರ ಪುತ್ರನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ.
ಇದನ್ನೂ ಓದಿ:ಉದ್ಯಮಿ ಪುತ್ರನ ಕೊಲೆ ಕೇಸ್: ಮಗನ ಹತ್ಯೆಗೆ ತಂದೆಯಿಂದ ಸುಪಾರಿ, ಶವ ಹೂತಿರುವ ಸ್ಥಳ ಪತ್ತೆ