ಹುಬ್ಬಳ್ಳಿ:ನಗರದ ಮ್ಯಾಗೇರಿ ಓಣಿಯಲ್ಲಿನ ವಾಣಿಜ್ಯ ಮಳಿಗೆಯಲ್ಲಿನ ಕಟ್ಟಡಗಳು ಶಿಥಿಲಗೊಂಡು ನೆಲಕ್ಕುರುಳುವ ಸ್ಥಿತಿಗೆ ತಲುಪಿದ್ದು, ಜನರು ಆತಂಕಕ್ಕೆ ಒಳಗಾಗಿದ್ದರು. ಈ ಕುರಿತಂತೆ 'ಈಟಿವಿ ಭಾರತ್' 'ಜೀವ ಬಲಿಗಾಗಿ ಕಾದು ಕುಳಿತ ಮಹಾನಗರ ಪಾಲಿಕೆ ಕಟ್ಟಡ' ಎಂಬ ವರದಿಯನ್ನು ಪ್ರಕಟಿಸಿದ್ದು, ಎತ್ತೆಚ್ಚ ಪಾಲಿಕೆ ಅಧಿಕಾರಿಗಳು ಕಟ್ಟಡವನ್ನು ನೆಲಸಮ ಮಾಡಲು ಮುಂದಾಗಿದ್ದಾರೆ. ಇದು ವರದಿ ಸಂದ ಫಲಶೃತಿಯಾಗಿದೆ.
ನಗರದ ಮ್ಯಾಗೇರಿ ಓಣಿಯಲ್ಲಿ ಕಳೆದ 50-60 ವರ್ಷಗಳ ಹಿಂದೆ ಮಹಾನಗರ ಪಾಲಿಕೆಯವರು ವಾಣಿಜ್ಯ ಮಳಿಗೆಯನ್ನು ಕಟ್ಟಿದ್ದರು. ಈ ಕಟ್ಟಡ ಈಗ ಶಿಥಿಲಗೊಂಡು ನೆಲಕ್ಕುರುಳುವ ಸ್ಥಿತಿಗೆ ತಲುಪಿದ್ದು, ಈ ಕಟ್ಟಡ ದುಸ್ಥಿತಿ ಕಂಡು ಜನರು ಆತಂಕಕ್ಕೆ ಒಳಗಾಗಿದ್ದರು. ಈ ಕುರಿತಂತೆ 'ಈಟಿವಿ ಭಾರತ್' ವರದಿ ಪ್ರಕಟ ಮಾಡಿತ್ತು. ಇದರಿಂದ ಎತ್ತೆಚ್ಚುಕೊಂಡ ಪಾಲಿಕೆ ಅಧಿಕಾರಿಗಳು ಮಳಿಗೆಗಳ ಕಟ್ಟಡಗಳನ್ನು ನೆಲಸಮ ಮಾಡಲು ಮುಂದಾಗಿದ್ದಾರೆ.
ಹುಬ್ಬಳ್ಳಿ ಜಿಲ್ಲೆಯ ಪಾಲಿಕೆ ಅಧಿಕಾರಿಗಳು ಕಟ್ಟಡ ನೆಲಸಮ ಮಾಡಲು ಕ್ರಮ ಕೈಗೊಂಡಿದ್ದು,,,ಈಟಿವಿ ವರದಿಯ ಫಲಶೃತಿಯಾಗಿದೆ ಈ ಬಗ್ಗೆ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ ಅವರು ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಪಾಲಿಕೆ ಕಟ್ಟಡ ತೆರವಿಗೆ ಮುಂದಾಗಿದೆ. ಆದರೆ ಈ ಕಟ್ಟಡದಲ್ಲಿ ಕೆಲ ವಾಣಿಜ್ಯ ಮಳಿಗೆ ಇರುವುದರಿಂದ ಕೆಲವರು ನ್ಯಾಯಾಲಯದಿಂದ ತಡೆ ತಂದಿದ್ದಾರೆ. ಆದಷ್ಟು ಬೇಗ ಕಾನೂನು ತೊಡಕು ಮುಗಿದ ಕೂಡಲೇ ತೆರವುಗೊಳಿಸಲಾಗುವುದು ಎಂದರು.
ಈ ಕಟ್ಟಡ ಸಂಪೂರ್ಣವಾಗಿ ಹಾಳಾಗಿದ್ದು, ಎಲ್ಲೆಂದರಲ್ಲಿ ಕಟ್ಟಡ ಬಿರುಕು ಬಿಟ್ಟಿದೆ. ಕೆಲವು ಭಾಗದಲ್ಲಿ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದಿದೆ. 20ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಈ ಕಟ್ಟಡದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದು ಜನನಿಬಿಡ ಪ್ರದೇಶವಾಗಿದ್ದು, ಸಾವಿರಾರು ಜನರು ದಿನನಿತ್ಯ ಇಲ್ಲಿ ಓಡಾಡುತ್ತಾರೆ. ಕುಸಿದು ಬೀಳುವ ಹಂತದಲ್ಲಿರುವ ಈ ಕಟ್ಟಡ ಯಾವಾಗ ಬೀಳುತ್ತೋ ಎನ್ನುವ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಕಟ್ಟಡ ತೆರವಿಗೆ ಮುಂದಾಗಿರುವ ಪಾಲಿಕೆ ಕ್ರಮವನ್ನು ಸ್ಥಳೀಯರು ಸ್ವಾಗತಿಸಿದ್ದು, 'ಈಟಿವಿ ಭಾರತ್' ವರದಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.