ಹುಬ್ಬಳ್ಳಿ: ಮಂಟೂರು ರಸ್ತೆಯ ಆಶ್ರಯ ಕಾಲೊನಿ ಬಳಿ ನಿರ್ಮಿಸಿರುವ ತಾತ್ಕಾಲಿಕ ಮೀನು ಮಾರುಕಟ್ಟೆಗೆ ಒದಗಿಸಲಾದ ಸೌಲಭ್ಯಗಳನ್ನು ಶಾಸಕ ಪ್ರಸಾದ ಅಬ್ಬಯ್ಯ ಪರಿಶೀಲನೆ ನಡೆಸಿದರು.
ಮೀನು ಮಾರುಕಟ್ಟೆ ಪರಿಶೀಲನೆ ನಡೆಸಿದ ಶಾಸಕ ಅಬ್ಬಯ್ಯ - ಹುಬ್ಬಳ್ಳಿ ಮೀನು ಮಾರುಕಟ್ಟೆ ನ್ಯೂಸ್
ಶಾಸಕ ಪ್ರಸಾದ್ ಅಬ್ಬಯ್ಯ ಅವರು ಹುಬ್ಬಳ್ಳಿಯ ಮಂಟೂರು ರಸ್ತೆಯ ಆಶ್ರಯ ಕಾಲೊನಿ ಬಳಿ ನಿರ್ಮಿಸಿರುವ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Mla visit
ವಿವಿಧೆಡೆಯಿಂದ ಮೀನುಗಳನ್ನು ಹೊತ್ತು ಬರುವ ವಾಹನಗಳು ಎಲ್ಲೆಂದರಲ್ಲಿ ನಿಲ್ಲುತ್ತಿರುವುದರಿಂದ ಬಮ್ಮಾಪುರ, ವೀರಾಪುರ, ಯಲ್ಲಾಪುರ ಹೊಲದ ಸರಹದ್ದಿನ ರೈತರು ಹೊಲಗಳಿಗೆ ತೆರಳು ತೊಂದರೆಯಾಗುತ್ತಿದೆ. ವಾಹನಗಳ ನಿಲುಗಡೆಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರಾದ ಸುರೇಶ್ ಇಟ್ನಾಳ ಅವರಿಗೆ ಸೂಚಿಸಿದರು.
ಮೀನು ಮಾರುಕಟ್ಟೆಯಿಂದ ಹರಿದು ಬರುತ್ತಿರುವ ಕೊಳಚೆ ನೀರು ರಸ್ತೆಗೆ ಬಂದು ನಿಲ್ಲುತ್ತಿರುವುದರಿಂದ ಸುತ್ತಲಿನ ಪರಿಸರ ಹಾಳಾಗುತ್ತಿದೆ. ಕೂಡಲೇ ಮಾರುಕಟ್ಟೆ ಎದುರು ಗಟಾರು ನಿರ್ಮಿಸಿ, ನೀರಿನ ಸಮಸ್ಯೆ ನಿವಾರಣೆಗೆ ಕೊಳವೆಬಾವಿ ಕೊರೆಯಿಸುವಂತೆ ತಿಳಿಸಿದರು.