ಕರ್ನಾಟಕ

karnataka

ETV Bharat / state

ಉಕ್ರೇನ್​​ನಲ್ಲಿ ಸಿಲುಕಿಕೊಂಡ ಹುಬ್ಬಳ್ಳಿ ಮೂಲದ MBBS ವಿದ್ಯಾರ್ಥಿನಿ.. ಪೋಷಕರಿಗೆ ಆತಂಕ - ಉಕ್ರೇನ್​​ನಲ್ಲಿ ಸಿಲುಕಿಕೊಂಡ ಹುಬ್ಬಳ್ಳಿ ಮೂಲದ MBBS ವಿದ್ಯಾರ್ಥಿನಿ ಚೈತ್ರಾ

Russia Ukraine War.. ಚೈತ್ರಾ MBBS ಮೂರನೇ ವರ್ಷ ವ್ಯಾಸಂಗ ಮಾಡುತ್ತಿದ್ದು, ತವರಿಗೆ ಮರಳಲು ಸಿದ್ದವಾಗಿದ್ದರು. ಆದರೆ ಉಕ್ರೇನ್​ ಏರ್​ಪೋರ್ಟ್​ ಮೇಲೆ ದಾಳಿ ಹಿನ್ನೆಲೆ, ವಿಮಾನ ಹಾರಾಟ ರದ್ದು ಮಾಡಲಾಗಿದೆ.

MBBS ವಿದ್ಯಾರ್ಥಿನಿ ಚೈತ್ರಾ
MBBS ವಿದ್ಯಾರ್ಥಿನಿ ಚೈತ್ರಾ

By

Published : Feb 24, 2022, 5:17 PM IST

ಹುಬ್ಬಳ್ಳಿ : ರಷ್ಯಾ-ಉಕ್ರೇನ್​ ಮಧ್ಯೆ ಯುದ್ಧ ಆರಂಭವಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಲ್ಲಿರುವ ಏರ್​ಪೋರ್ಟ್​ಗಳ ಮೇಲೆ ರಷ್ಯಾ ದಾಳಿ ಮಾಡಿರುವ ಹಿನ್ನೆಲೆ ವಿಮಾನ ಸೇವೆ ಸ್ಥಗಿತಗೊಂಡಿದೆ. ಹಲವಾರು ವಿದೇಶಿ ವಿದ್ಯಾರ್ಥಿಗಳು ಉಕ್ರೇನ್​ನಲ್ಲಿದ್ದು, ಅವರೆಲ್ಲ ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾರವಾಡ ಜಿಲ್ಲೆಯ ಓರ್ವ ವಿದ್ಯಾರ್ಥಿನಿ ವ್ಯಾಸಂಗ ‌ಮಾಡುತ್ತಿದ್ದಾಳೆ. ಉಕ್ರೇನ್ ‌ಮೇಲೆ ರಷ್ಯಾ ನಿರಂತರ ದಾಳಿ ನಡೆಸುತ್ತಿದ್ದು, ಇಲ್ಲಿರುವ ವಿದ್ಯಾರ್ಥಿನಿಯ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.

ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಯುವತಿ ಚೈತ್ರಾ MBBS ವ್ಯಾಸಂಗಕ್ಕೆ ಉಕ್ರೇನ್​ ದೇಶಕ್ಕೆ ತೆರಳಿದ್ದರು. ಚೈತ್ರಾ MBBS ಮೂರನೇ ವರ್ಷ ವ್ಯಾಸಂಗ ಮಾಡುತ್ತಿದ್ದು, ತವರಿಗೆ ಮರಳಲು ಸಿದ್ಧವಾಗಿದ್ದರು. ಆದರೆ ವಿಮಾನ ನಿಲ್ದಾಣದ ಮೇಲೆ ದಾಳಿ ಹಿನ್ನೆಲೆ, ವಿಮಾನ ಹಾರಾಟ ರದ್ದು ಮಾಡಲಾಗಿದೆ.

ಇದನ್ನೂ ಓದಿ : ಉಕ್ರೇನ್ ಏರ್ಪೋರ್ಟ್​ನಲ್ಲಿ ಸಿಲುಕಿರುವ ರಾಜ್ಯದ‌ 10 ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮ: ಸಿಎಂ ಬೊಮ್ಮಾಯಿ

ಈ ಹಿನ್ನೆಲೆ ಪ್ರಯಾಣ ರದ್ದಾದ ಕಾರಣ ಪ್ರಯಾಣಿಕರನ್ನ ಬಂಕರ್​​ನಲ್ಲಿ‌ ಉಳಿದುಕೊಳ್ಳಲು ಉಕ್ರೇನ್ ಸರ್ಕಾರ ವ್ಯವಸ್ಥೆ ಮಾಡಿದೆ. ಚೈತ್ರಾ ಕುಟುಂಬದ ಸದಸ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಚೈತ್ರಾ ಅವರ ತಾಯಿ ಖಾಸಗಿ ಶಾಲೆ‌ ನಡೆಸುತ್ತಿದ್ದಾರೆ.

ABOUT THE AUTHOR

...view details