ಕರ್ನಾಟಕ

karnataka

ETV Bharat / state

ಬಿಕೋ ಎನ್ನುತ್ತಿದೆ ವಾಣಿಜ್ಯ ನಗರಿ : ಬಸ್​ ಸಂಚಾರ ಸಂಪೂರ್ಣ ಸ್ತಬ್ದ - Latest corona news in hubli

ಇಂದಿನಿಂದ ಮಾರ್ಚ್ 31 ವರೆಗೆ ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್, ಯಾವುದೆ ಬಸ್​ಗಳ ಸಂಚಾರವಿಲ್ಲ ನಿಯಮ ಮೀರಿದ್ರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾಧಳಿತ.

hubli
ಬಸ್​ ಸಂಚಾರ ಸಂಪೂರ್ಣ ಸ್ತಬ್ದ

By

Published : Mar 23, 2020, 11:02 AM IST

ಹುಬ್ಬಳ್ಳಿ :ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಇಂದಿನಿಂದ ಮಾರ್ಚ್ 31 ವರೆಗೆ ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶ ನೀಡಲಾಗಿದೆ.

ಸರ್ಕಾರದ ಆದೇಶದಂತೆ ಲಾಕ್ ಡೌನ್ ಆಗಿದ್ದು, ಇಂದಿನಿಂದ ಮತ್ತೆ 144 ಸೆಕ್ಷನ್ ಮುಂದುವರೆಯಲಿದೆ, ತುರ್ತು ಸೇವೆ ಹೊರತುಪಡಿಸಿ ಯಾವುದೇ ಸೇವೆ ಲಭ್ಯವಿಲ್ಲ. ಧಾರವಾಡದಲ್ಲಿ ಕೊರೋನಾ ಸೋಂಕಿತನ ಪತ್ತೆ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಕ್ರಮವಾಗಿ ಜಿಲ್ಲೆಯ ಎಲ್ಲಾ ಹೋಟೆಲ್, ಬಾರ್, ರೆಸ್ಟೋರೆಂಟ್ ಸೇರಿದಂತೆ ಜನ ಸೇರುವ ಎಲ್ಲ ಮಾಲ್​ಗಳು ಕೂಡ ಬಂದ್ ಮಾಡಲಾಗಿದೆ.

ಬಸ್​ ಸಂಚಾರ ಸಂಪೂರ್ಣ ಸ್ತಬ್ದ

ದಿನಸಿ, ಹಾಲು, ಅಂಗಡಿಗೆ ವಿನಾಯತಿ ನೀಡಲಾಗಿದೆ. ಯಾವುದೇ ಸಾರಿಗೆ ಸಂಚಾರವಿಲ್ಲ. ಜಿಲ್ಲಾಡಳಿತದ ಸೂಚನೆ ಉಲ್ಲಂಘನೆ ಮಾಡಿದ್ರೆ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಲಾಗಿದೆ, ಹೀಗಾಗಿ ವಾಣಿಜ್ಯ ನಗರಿ ರಸ್ತೆಗಳು ಹಾಗೂ ಹುಬ್ಬಳ್ಳಿಯ ಬಸ್ ನಿಲ್ದಾಣ ಯಾವುದೇ ಬಸ್ ಇಲ್ಲದೆ ಸಂಪೂರ್ಣ ಖಾಲಿ‌ ಖಾಲಿ ಹೊಡೆಯುತ್ತಿದೆ.

ABOUT THE AUTHOR

...view details