ಹುಬ್ಬಳ್ಳಿ:ಕಾನೂನು ವಿಶ್ವವಿದ್ಯಾನಿಲಯವು ಪದವಿಯ 6ನೇ ಸೆಮಿಸ್ಟರ್ನ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಿಸುವ ಮೊದಲೇ ಪೂರಕ ಪರೀಕ್ಷೆಯ ಶುಲ್ಕ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದ ವಿದ್ಯಾರ್ಥಿಗಳು ಹರಕೆ ಕುರಿಯಂತೆ ಅಣಕು ಮಾಲೆ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.
ಕಾನೂನು ವಿಶ್ವ ವಿದ್ಯಾಲಯದ 6ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು ಕಳೆದ ನ. 23ರಂದು ಪರೀಕ್ಷೆ ಬರೆದಿದ್ದು, ಜ. 17ರಂದು ಫಲಿತಾಂಶ ಹೊರಬಂದಿತ್ತು. ನಿಯಮದ ಅನುಸಾರ ಫೆ. 3ರ ಒಳಗೆ ಸುಮಾರು 16 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿದ್ದರು. ಮರುಮೌಲ್ಯಪಾನದ ಫಲಿತಾಂಶ ಪ್ರಕಟಿಸುವ ಮೊದಲು ವಿವಿ ಆಡಳಿತ ಮಂಡಳಿ, ಪರೀಕ್ಷಾ ದಿನಾಂಕ ಘೋಷಿಸಿ ಮತ್ತೊಮ್ಮೆ ಶುಲ್ಕ ಭರ್ತಿ ಮಾಡಿಕೊಳ್ಳುತ್ತಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಪಾದಿಸಿದ್ದಾರೆ.