ಕರ್ನಾಟಕ

karnataka

ETV Bharat / state

ಕೋವಿಡ್‌ ಎರಡನೇ ಅಲೆ ಎದುರಿಸಲು ಹುಬ್ಬಳ್ಳಿಯ ಕಿಮ್ಸ್ ಸರ್ವ ಸನ್ನದ್ಧ

ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ 90 ಮಂದಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. 1200 ಆಕ್ಸಿಜನ್ ಬೆಡ್​​ಗಳಿವೆ. ಅದರಲ್ಲಿ ಕೊವಿಡ್​ಗೆ ಮೀಸಲಿಟ್ಟ 300 ಬೆಡ್​ಗಳಲ್ಲಿ 100 ಐಸಿಯು ಹಾಗೂ 200 ಆಕ್ಸಿಜನ್ ಬೆಡ್​ಗಳಾಗಿವೆ. ಮುಂದೆ ಸೋಂಕಿತರ ಸಂಖ್ಯೆ ಹೆಚ್ಚಾದ್ರೆ ಬೆಡ್​ಗಳನ್ನು 500 ರಿಂದ 600 ರವರೆಗೆ ಹೆಚ್ಚಿಸುವ ಯೋಚನೆಯನ್ನು ಕಿಮ್ಸ್ ಆಡಳಿತ ಮಂಡಳಿ ಹೊಂದಿದೆ.

hubli kims is ready to face challenge of  second wave covid
ಕೋವಿಡ್‌ ಎರಡನೇ ಅಲೆ ಎದುರಿಸಲು ಹುಬ್ಬಳ್ಳಿಯ ಕಿಮ್ಸ್ ಸರ್ವ ಸನ್ನದ್ಧ

By

Published : Apr 20, 2021, 2:18 PM IST

ಹುಬ್ಬಳ್ಳಿ: ಕಳೆದ ವರ್ಷ ಕೊರೊನಾ ಸಮಯದಲ್ಲಿ ಹುಬ್ಬಳ್ಳಿಯ ಕಿಮ್ಸ್ ಉತ್ತಮ ಸೇವೆ ನೀಡಿ ಸರ್ಕಾರದಿಂದ ಪ್ರಶಂಸೆ ಪಡೆದಿತ್ತು. ಇದೀಗ ಕೋವಿಡ್‌ನ ಎರಡನೇ ಅಲೆ ಎದುರಿಸಲು ಆಸ್ಪತ್ರೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕಳೆದ ಕೆಲ ದಿನಗಳಿಂದ ಕೋವಿಡ್​​ ಎರಡನೇ ಅಲೆ ಬಹಳ ವೇಗವಾಗಿಯೇ ಹರಡುತ್ತಿದೆ. ಮೊದಲ ಅಲೆಯಿಂದ ಇನ್ನೇನು ಚೇತರಿಕೆ ಕಾಣುತ್ತಿರುವ ಹೊತ್ತಲ್ಲಿ ಕೊರೊನಾ​​ ಎರಡನೇ ಅಲೆ ಜನರಿಗೆ ಶಾಕ್​ ನೀಡಿದೆ. ಸೋಂಕು ಪ್ರಕರಣಗಳು ಎಗ್ಗಿಲ್ಲದಂತೆ ಏರುತ್ತಿದೆ. ಆಸ್ಪತ್ರೆಗಳಲ್ಲಿ ಸಿಬ್ಬಂದಿಗೆ ಒತ್ತಡ ಹೆಚ್ಚಾಗಿದೆ. ಚಿಕಿತ್ಸೆಗೆ ಪೂರಕವಾಗಿ ಬೇಕಾದ ಬೆಡ್​, ಐಸಿಯು ವ್ಯವಸ್ಥೆ, ಆಕ್ಸಿಜನ್​ ಸೇರಿದಂತೆ ವೈದ್ಯಕೀಯ ವ್ಯವಸ್ಥೆಗಳ ಕೊರತೆ ಎದ್ದು ಕಾಣುತ್ತಿದೆ. ಆದರೆ ಕೊರೊನಾ ವಿರುದ್ಧ ಸಮರಕ್ಕೆ ಹುಬ್ಬಳ್ಳಿಯ ಕಿಮ್ಸ್ ಸಿದ್ಧವಾಗಿದೆ.

ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕರ ಹೇಳಿಕೆ

ಕಳೆದ ಒಂದು ತಿಂಗಳ ಹಿಂದೆ ಕೇವಲ 8-10 ಸಕ್ರಿಯ ಕೋವಿಡ್ ಪ್ರಕರಣಗಳಿದ್ದ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಇದೀಗ 120ಕ್ಕೂ ಹೆಚ್ಚು ಪ್ರಕರಣಗಳಿವೆ. ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿರುವ ಕೋವಿಡ್​ ಎರಡನೇ ಅಲೆ ಎದುರಿಸಲು ಎದುರಿಸಲು ಕಿಮ್ಸ್ ಮತ್ತೆ ಸಜ್ಜಾಗಿದೆ. ಶೇ. 70ರಷ್ಟು ಪ್ರಕರಣಗಳು ಹುಬ್ಬಳ್ಳಿಯಲ್ಲಿ ಪತ್ತೆಯಾಗುತ್ತಿವೆ. ಹೀಗಾಗಿ ಕಿಮ್ಸ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹೆಚ್ಚೆಚ್ಚು ರೋಗಿಗಳು ಬರುತ್ತಿದ್ದಾರೆ. ಅದಕ್ಕೆ ತಕ್ಕಂತೆ ಈ ಹಿಂದಿನ ವೈದ್ಯಕೀಯ ತಂಡವನ್ನು ಬಳಸಿಕೊಂಡು ಸೂಕ್ತ ರೀತಿಯಲ್ಲಿ ಚಿಕಿತ್ಸೆ ಒದಗಿಸಲು ಕಿಮ್ಸ್ ಸಜ್ಜಾಗುತ್ತಿದೆ.

ಪಿಪಿಇ ಕಿಟ್, ಮೆಡಿಸಿನ್‌ಗಳ ಸಂಗ್ರಹ ಮಾಡಿಕೊಂಡಿದೆ. ಇನ್ನೂ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಮಾನಸಿಕ ಸ್ಥೈರ್ಯ ತುಂಬಲು ಹಿಂದೆ ಕಾರ್ಯನಿರ್ವಹಣೆ ಮಾಡಿದ್ದ ತಂಡವೇ ಈಗಲೂ ಹೊಣೆ ನಿಭಾಯಿಸಲಿದೆ. ಅದಲ್ಲದೇ ಈ ವರೆಗೆ ಕಿಮ್ಸ್‌ನಲ್ಲಿ 20 ಕೆಎಲ್ ಆಕ್ಸಿಜನ್ ಪೂರೈಕೆ ಟ್ಯಾಂಕ್ ಇತ್ತು. ಫೆಬ್ರವರಿಯಲ್ಲಿ ಇನ್ನೊಂದು 20 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಸ್ಥಾಪಿಸಲಾಗಿದೆ. ಈಗಾಗಲೇ 125 ಬೆಡ್‌ಗಳನ್ನು ಮೀಸಲಿಡಲಾಗಿದ್ದು, ಇದನ್ನು 300ಕ್ಕೆ ವಿಸ್ತರಣೆ ಮಾಡಲಾಗಿದೆ.

ಇದನ್ನೂ ಓದಿ:ಅವಳಿನಗರದಲ್ಲಿ ಕ್ರಿಕೆಟ್​ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಸಜ್ಜು

ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ 90 ಮಂದಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. 1200 ಆಕ್ಸಿಜನ್ ಬೆಡ್​​ಗಳಿವೆ. ಅದರಲ್ಲಿ ಕೊವಿಡ್​ಗೆ ಮೀಸಲಿಟ್ಟ 300 ಬೆಡ್​ಗಳಲ್ಲಿ 100 ಐಸಿಯು ಹಾಗೂ 200 ಆಕ್ಸಿಜನ್ ಬೆಡ್​ಗಳಾಗಿವೆ. ಮುಂದೆ ಸೋಂಕಿತರ ಸಂಖ್ಯೆ ಹೆಚ್ಚಾದ್ರೆ ಬೆಡ್​ಗಳನ್ನು 500 ರಿಂದ 600 ರವರೆಗೆ ಹೆಚ್ಚಿಸುವ ಯೋಚನೆಯನ್ನು ಕಿಮ್ಸ್ ಆಡಳಿತ ಮಂಡಳಿ ಹೊಂದಿದೆ.

ಇದರ ಜತೆಗೆ 200 ವೆಂಟಿಲೆಟರ್​ಗಳಲ್ಲಿ 70 ಕೋವಿಡ್ ಪ್ರಕರಣಗಳಿಗೆ, ಉಳಿದ 130ನ್ನು ನಾನ್ ಕೋವಿಡ್ ಪ್ರಕರಣಗಳಿಗೆ ಮೀಸಲಿಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ನೀಡಲಾಗುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಒತ್ತಡ ಕಡಿಮೆಯಾಗಿದೆ. ಒಟ್ಟಿನಲ್ಲಿ ಕಿಮ್ಸ್ ಎರಡನೇ ಅಲೆಗೆ ಕಡಿವಾ ಹಾಕಲು ಸರ್ವ ಸನ್ನದ್ಧವಾಗಿದೆ.

ABOUT THE AUTHOR

...view details