ಕರ್ನಾಟಕ

karnataka

ETV Bharat / state

ಕೊರೊನಾ ಸ್ಪೋಟ.. ಹುಬ್ಬಳ್ಳಿಯ ಶ್ರೀ ಕಾಡಸಿದ್ದೇಶ್ವರ ಕಾಲೇಜ್​​ ಸೀಲ್‌ಡೌನ್ - ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜು ಸೀಲ್ ಡೌನ್

ಇಂದು ಬೆಳಗ್ಗೆ ಕಾಲೇಜ್‌ನ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಮುಂದಿನ ಆದೇಶ ಬರುವವರೆಗೂ ಸೀಲ್‌ಡೌನ್ ಇರಲಿದೆ. ನಾಳೆಯಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ನಡೆಯಲಿವೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ..

ಕಾಡಸಿದ್ದೇಶ್ವರ ಕಾಲೇಜ್​​ ಸೀಲ್ ಡೌನ್
ಕಾಡಸಿದ್ದೇಶ್ವರ ಕಾಲೇಜ್​​ ಸೀಲ್ ಡೌನ್

By

Published : Jan 14, 2022, 6:38 PM IST

ಹುಬ್ಬಳ್ಳಿ: ವಿದ್ಯಾನಗರದ ಪ್ರತಿಷ್ಠಿತ ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಹೆಚ್. ಎಸ್.ಕೋತಂಬ್ರಿ ಕಾಲೇಜಿನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಹು-ಧಾ ಮಹಾನಗರ ಪಾಲಿಕೆಯಿಂದ ಸೀಲ್‌ಡೌನ್ ಮಾಡಲಾಯಿತು.

ಕಾಲೇಜಿನ ಪ್ರಾಚಾರ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಕಳೆದೆರಡು ದಿನಗಳ ಹಿಂದೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಅದರಂತೆ ನಿನ್ನೆ ವರದಿ ಬಂದಿದ್ದು, ಅದರಲ್ಲಿ ಕೆಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸೋಂಕು ವಕ್ಕರಿಸಿದೆ. ‌ ಮೂಲಗಳ ಮಾಹಿತಿ ಪ್ರಕಾರ ಸುಮಾರು 16ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್‌ ಪತ್ತೆಯಾಗಿವೆ ಎನ್ನಲಾಗಿದೆ.

ಅದರಂತೆ ಇಂದು ಬೆಳಗ್ಗೆ ಕಾಲೇಜ್‌ನ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಮುಂದಿನ ಆದೇಶ ಬರುವವರೆಗೂ ಸೀಲ್‌ಡೌನ್ ಇರಲಿದೆ. ನಾಳೆಯಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ನಡೆಯಲಿವೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.

ಆದರೆ, ಕೊರೊನಾದಿಂದಾಗಿ ಕಾಲೇಜು ಸೀಲ್‌ಡೌನ್ ಮಾಡಿದರೂ ಸಹಿತ ಕಾಲೇಜಿನ ಸಿಬ್ಬಂದಿ ಕಾಲೇಜಿಗೆ ಪ್ರವೇಶ ಮಾಡುತ್ತಿರುವುದು ಮತ್ತಷ್ಟು ಆತಂಕ ತರುತ್ತಿದೆ. ಇದರಿಂದ ಸೋಂಕು ಮತ್ತಷ್ಟು ಉಲ್ಬಣವಾಗುವ ಭೀತಿ ಎದುರಾಗಿದೆ. ಆದ್ದರಿಂದ ಕಾಲೇಜು ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧಕ್ಕೆ ಪಾಲಿಕೆ ಆದೇಶ ಹೊರಡಿಸಬೇಕಿದೆ.

For All Latest Updates

TAGGED:

ABOUT THE AUTHOR

...view details