ಕರ್ನಾಟಕ

karnataka

ETV Bharat / state

ಮನೆ ಬಿಟ್ಟು ಬಂದ ಬಾಲಕನನ್ನು ಪಾಲಕರಿಗೆ ಒಪ್ಪಿಸಿ ಮಾನವೀಯತೆ ಮೆರೆದ ಪತ್ರಕರ್ತರು - Hubli journalists humanity news

ಹುಬ್ಬಳ್ಳಿ ಪತ್ರಕರ್ತರ ಸಂಘದ ಸದಸ್ಯರು ಮನೆ ಬಿಟ್ಟು ಬಂದಿದ್ದ ಬಾಲಕನನ್ನು ಮರಳಿ ಪೋಷಕರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Boy
Boy

By

Published : Sep 24, 2020, 10:42 AM IST

ಹುಬ್ಬಳ್ಳಿ: ಮನೆ ಬಿಟ್ಟು ಬಂದಿದ್ದ ಬಾಲಕನೋರ್ವನನ್ನು ಪಾಲಕರಿಗೆ ತಲುಪಿಸುವ ಮೂಲಕ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಹಾಗೂ ಹುಬ್ಬಳ್ಳಿ ಪತ್ರಕರ್ತರ ಸಂಘದ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.

ಬೆಳಗ್ಗೆ ಪ್ರೆಸ್ ಕ್ಲಬ್​​ಗೆ ಏಕಾಏಕಿ ಒಬ್ಬ ಪುಟ್ಟ ಬಾಲಕ ಪತ್ರಿಕೆ ಹಾಕುವ ಕೆಲಸ ಕೇಳಿಕೊಂಡು ಬಂದಿದ್ದಾನೆ. ಆಗ ಆತನ ಬಗ್ಗೆ ವಿಚಾರಿಸಿದಾಗ ಬಾಲಕ ಮನೆ ಬಿಟ್ಟು ಬಂದಿರುವ ಮಾಹಿತಿ ತಿಳಿದು ಬಂದಿದೆ. ನಂತರ ಪತ್ರಕರ್ತರು ಉಪಹಾರ ನೀಡಿ ಉಪಚರಿಸಿ ಬಾಲಕನನ್ನು ಪಾಲಕರಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇನ್ನು ಬಾಲಕನ ಪಾಲಕರು ಪೊಲೀಸ್ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.

ABOUT THE AUTHOR

...view details