ಕರ್ನಾಟಕ

karnataka

ETV Bharat / state

ಹೆಡ್ ಕಾನ್ಸ್​ಟೇಬಲ್​​​ ​- ನೆರೆ ಮನೆಯವರ ಹೊಡೆದಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಹೆಡ್ ಕಾನ್ಸ್​​​ಸ್ಟೇಬಲ್​ ಮತ್ತು ನೆರೆ ಮನೆಯವರ ಹೊಡೆದಾಟ

ಕಳೆದ ಕೆಲ ದಿನಗಳ ಹಿಂದೆ ನೀರಿನ ವಿಚಾರವಾಗಿ ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಪುರಾಣಿಕಮಠ ಮತ್ತು ನೆರೆ ಮನೆಯವರ ನಡುವಿನ ಹೊಡೆದಾಟ ನಡೆದಿತ್ತು. ಈ ಕುರಿತಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Hubli Head Constable, Neighbors Fighting Captured on CCTV
ಹೆಡ್ ಕಾನ್ಸ್​​​ಸ್ಟೇಬಲ್​ ಮತ್ತು ನೆರೆ ಮನೆಯವರ ಹೊಡೆದಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

By

Published : Feb 23, 2022, 10:32 PM IST

ಹುಬ್ಬಳ್ಳಿ:ನೀರಿನ ವಿಚಾರವಾಗಿ ಸಂಚಾರಿ ಠಾಣೆಯಲ್ಲಿ ಹೆಡ್ ಕಾನ್ಸ್​​​ಸ್ಟೇಬಲ್ ಹಾಗೂ ನೆರೆ ಮನೆಯವರ ನಡುವಿನ ಹೊಡೆದಾಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.‌

ಹೆಡ್ ಕಾನ್ಸ್​​​ಟೇಬಲ್​​​ ಮತ್ತು ನೆರೆ ಮನೆಯವರ ಹೊಡೆದಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಳೆದ ಕೆಲ ದಿನಗಳ ಹಿಂದೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಡ್ ಕಾನ್ಸ್​​​​​ಟೇಬಲ್​​ ಪುರಾಣಿಕಮಠ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತ ಅವರ ನೆರೆ ಮನೆಯವರು ಪೇದೆ ನಮ್ಮಮೇಲೆ ಹಲ್ಲೆ ಮಾಡಿ ನಮಗಿಂತ ಮೊದಲು ಹೋಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಪಿಸಿದ್ದರು. ಸದ್ಯ ಎರಡು ಕುಟುಂಬದ ಸದಸ್ಯರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನೀರಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ಆರಂಭವಾಗಿ ವಿಕೋಪಕ್ಕೆ ತಿರುಗಿತ್ತು. ಒಬ್ಬರಿಗೊಬ್ಬರು ಇಟ್ಟಿಗೆ ಮತ್ತು ರಾಡ್​​ನಿಂದ ಬಡಿದಾಡಿಕೊಂಡಿರುವ ದೃಶ್ಯಗಳು ಎದುರು ಮನೆಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದೇ ವಿಡಿಯೋ ಇಟ್ಟುಕೊಂಡು ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಹೆಡ್​ಕಾನ್ಸ್​​​ಟೇಬಲ್​​ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್: ಪಕ್ಕದ ಮನೆಯವರ ಮೇಲೆ ಹಲ್ಲೆ ಮಾಡಿ ಆಸ್ಪತ್ರೆಗೆ ದಾಖಲಾದರೇ ಪೊಲೀಸಪ್ಪ?

ABOUT THE AUTHOR

...view details