ಕರ್ನಾಟಕ

karnataka

ETV Bharat / state

ಚಾಲನೆ ವೇಳೆ ನಿದ್ರೆಗೆ ಜಾರುವ ಅಭ್ಯಾಸವೇ? ಡೋಂಟ್ ವರಿ..! ಇಲ್ಲಿದೆ ನಿಮ್ಮನ್ನು ಎಚ್ಚರಗೊಳಿಸುವ ಕನ್ನಡಕ - ಈ ಕನ್ನಡಕ ನಿಮಗೆ ಬಹಳ ಉಪಯುಕ್ತ

ಹುಬ್ಬಳ್ಳಿ ಹುಡುಗಿಯೊಬ್ಬಳು ಸಾಧನೆಯೊಂದು ಮಾಡಿದ್ದಾರೆ. ನೀವು ವಾಹನ ಚಾಲನೆ ಮಾಡುತ್ತಿದ್ದಾಗ ನಿದ್ರೆಗೆ ಜಾರುವ ಅಭ್ಯಾಸವಿದ್ರೆ ಈ ಕನ್ನಡಕ ನಿಮಗೆ ಬಹಳ ಉಪಯುಕ್ತವಾಗಿದೆ. ಅದು ಹೇಗೆ ಎಂಬುದನ್ನು ನೋಡುವುದಾದರೆ,

Anti Sleep Droosiness Preventer Machine  Hubli Girl Invents Anti Sleep Drowsiness  Anti Sleep Drowsiness Preventer Machine news  ಚಾಲನೆ ವೇಳೆ ನಿದ್ರೆಗೆ ಜಾರುವ ಅಭ್ಯಾಸ  ನಿಮ್ಮನ್ನು ಎಚ್ಚರಗೊಳಿಸುವ ಕನ್ನಡಕ  ಪಿಯುಸಿ ಮೊದಲ ವರ್ಷದಲ್ಲಿ ಅಭ್ಯಾಸ  ಆ್ಯಂಟಿ ಸ್ಲೀಪ್ ಡ್ರೌಸಿನೆಸ್ ಪ್ರಿವೆಂಟರ್ ಯಂತ್ರ  ನೆ ಪಾರದರ್ಶಕ ಕನ್ನಡಕಕ್ಕೆ ಚಾರ್ಜೆಬಲ್ ಬ್ಯಾಟರಿ  ಈ ಕನ್ನಡಕ ನಿಮಗೆ ಬಹಳ ಉಪಯುಕ್ತ  ಹುಬ್ಬಳ್ಳಿ ಹುಡುಗಿಯೊಬ್ಬಳು ಸಾಧನೆ
ಆ್ಯಂಟಿ ಸ್ಲೀಪ್ ಡ್ರೌಸಿನೆಸ್ ಪ್ರಿವೆಂಟರ್ ಯಂತ್ರ ಪರೀಕ್ಷೆ

By ETV Bharat Karnataka Team

Published : Oct 20, 2023, 11:55 AM IST

Updated : Oct 20, 2023, 11:01 PM IST

ಆ್ಯಂಟಿ ಸ್ಲೀಪ್ ಡ್ರೌಸಿನೆಸ್ ಪ್ರಿವೆಂಟರ್ ಯಂತ್ರದ ಬಗ್ಗೆ ಮಾಹಿತಿ

ಹುಬ್ಬಳ್ಳಿ:ಚಾಲನೆ ವೇಳೆ ನಿದ್ರೆಗೆ ಜಾರೋ ಅಭ್ಯಾಸವೇ? ಡೋಂಟ್ ವರಿ..! ಈ ಕನ್ನಡಕ ಹಾಕ್ಕೊಳ್ಳಿ ಸೇಫ್ ಡ್ರೈವ್ ಮಾಡಿ. ಇದಲ್ಲದೇ ವಿದ್ಯಾರ್ಥಿಗಳು ಓದುವಾಗ ನಿದ್ರೆಗೆ ಜಾರಿದ್ರೂ ಎಚ್ಚರಿಸುವ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರನ್ನೂ ಅಲರ್ಟ್ ಮಾಡುವ ಆ್ಯಂಟಿ ಸ್ಲೀಪ್ ಡ್ರೌಸಿನೆಸ್ ಪ್ರಿವೆಂಟರ್ ಯಂತ್ರವನ್ನು ಹುಬ್ಬಳ್ಳಿ ಹುಡುಗಿಯೊಬ್ಬಳು ಶೋಧಿಸಿದ್ದಾರೆ.

ಹುಬ್ಬಳ್ಳಿಯ ರಬಿಯಾ ಫಾರೂಕಿ ಎಂಬ ವಿದ್ಯಾರ್ಥಿನಿಯೇ ಈ ವಿನೂತನ ಯಂತ್ರ ಕಂಡುಹಿಡಿದವರು. ನಗರದ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿನಿ ರಬಿಯಾ ಸದ್ಯ ವಿದ್ಯಾನಿಕೇತನ್ ಕಾಲೇಜಿನಲ್ಲಿ ಪಿಯುಸಿ ಮೊದಲ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ರಬಿಯಾ ಫಾರೂಕಿ ಪೋಷಕರ ಸಂತಸ

ವಾಹನ ಚಲಾಯಿಸುವಾಗ ಚಾಲಕ ಒಮ್ಮೊಮ್ಮೆ ನಿದ್ದೆಗೆ ಜಾರುವುದು ಸಹಜ. ಚಾಲಕ ನಿದ್ದಿಗೆ ಜಾರುವುದರಿಂದ ಅಪಘಾತಗಳು ಸಂಭವಿಸಿ ಪ್ರಾಣ ಪಕ್ಷಿ ಹಾರಿ ಹೋಗಿರುವ ಅನೇಕ ಘಟನೆಗಳಿವೆ. ಅತೀ ಹೆಚ್ಚು ಅಪಘಾತಗಳು ಡ್ರೈವಿಂಗ್ ವೇಳೆ ನಿದ್ರೆಗೆ ಜಾರಿದ್ದರಿಂದಲೇ ಸಂಭವಿಸುತ್ತಿವೆ. ಇಂತಹ ಅಪಘಾತಗಳನ್ನು ತಡೆಯಲೆಂದೇ ವಿದ್ಯಾರ್ಥಿನಿ ಇಂತಹದೊಂದು ಯಂತ್ರವನ್ನು ಶೋಧನೆ ಮಾಡಿದ್ದಾರೆ.

ಆ್ಯಂಟಿ ಸ್ಲೀಪ್ ಡ್ರೋಸೆನೆಸ್ ಪ್ರಿವೆಂಟರ್ ಯಂತ್ರ ಶೋಧನೆ ಪಾರದರ್ಶಕ ಕನ್ನಡಕಕ್ಕೆ ಚಾರ್ಜೆಬಲ್ ಬ್ಯಾಟರಿ, ಸಿಬ್ ಬಝರ್ ಹಾಗೂ ಐಆರ್ ಸೆನ್ಸಾರ್ ಅಳವಡಿಕೆ ಮಾಡಲಾಗಿದೆ. ವಾಹನ ಚಾಲನೆ ಮಾಡುವಾಗ ಈ ಕನ್ನಡಕ ಧರಿಸಿದ್ರೆ ಸಾಕು ಸ್ವಲ್ಪ ಕಣ್ಣು ಮುಚ್ಚಿದರೂ ಕ್ಷಣಾರ್ಧದಲ್ಲಿ ಆ್ಯಕ್ಟಿವ್ ಆಗುತ್ತೆ. ನ್ಯಾನೋ ಅರ್ಡುನೋ ಬಝರ್ ರಿಂಗಣಿಸಿ ಚಾಲಕನನ್ನು ಎಚ್ಚರಿಸುತ್ತದೆ.

ವಿದ್ಯಾರ್ಥಿನಿ ರಬಿಯಾ ಫಾರೂಕಿ ಮಾತು

ಕೇವಲ 400 – 450 ರೂಪಾಯಿಗೆ ಈ ಕನ್ನಡಕ ತಯಾರಾಗುತ್ತದೆ. ಇಂತಹ ಕನ್ನಡಕ ಧರಿಸಿದ್ರೆ ಆಗೋ ಅನಾಹುತ ತಪ್ಪಿಸಬಹುದಾಗಿದೆ. ಈ ಕನ್ನಡಕ ದೆಹಲಿಯಲ್ಲಿ ನಡೆದ ಇನ್ಸ್ಪೈರ್ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರದರ್ಶನ ಕಂಡಿದೆ. ಅಷ್ಟೇ ಅಲ್ಲ ರಬಿಯಾ ಶೋಧಿಸಿದ ಕನ್ನಡಕವು ರಾಷ್ಟ್ರ ಮಟ್ಟದ ಉತ್ತಮ ಮಾದರಿ ಪ್ರಶಸ್ತಿಗೂ ಆಯ್ಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರದರ್ಶನಕ್ಕೂ ಆಯ್ಕೆಯಾಗಿದೆ‌.

ಆ್ಯಂಟಿ ಸ್ಲೀಪ್ ಡ್ರೌಸಿನೆಸ್ ಪ್ರಿವೆಂಟರ್ ಯಂತ್ರ ಪರೀಕ್ಷೆ

ಹೇಗೆ ಹುಟ್ಟಿಕೊಂಡಿತ್ತು ಈ ಆಲೋಚನೆ?:ಊಟಿಗೆ ಟೂರ್ ಹೋಗಿದ್ದಾಗ ಭೀಕರ ಅಪಘಾತ ಸಂಭವಿಸಿತ್ತು. ಚಾಲಕ ನಿದ್ರೆಗೆ ಜಾರಿದ್ದರಿಂದ ಆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಇಡೀ ಕುಟುಂಬದ ಸದಸ್ಯರು ಸಾವನ್ನಪ್ಪಿದ್ದರು. ಈ ರೀತಿಯ ಅಪಘಾತಗಳನ್ನು ಹೇಗೆ ತಪ್ಪಿಸಬಹುದೆಂದು ಆಲೋಚಿಸಿದೆ. ಕೊನೆಗೆ ಈ ಯಂತ್ರ ರೂಪಿಸಿದೆ ಎಂದು ರಬಿಯಾ ಹೇಳಿದ್ದಾರೆ. ರಬಿಯಾ ಫಾರೂಕಿ ಕಾರ್ಯಕ್ಕೆ ಪೋಷಕರು, ಶಿಕ್ಷಕ ವೃಂದ ಮೆಚ್ಚುಗೆ ವ್ಯಕ್ತವಾಗಿದೆ.

ಓದಿ:ನೃತ್ಯ, ಸಾಹಿತ್ಯ ಕೃಷಿಯಲ್ಲಿ ಪರಿಣಿತರು: 88ರ ಹರೆಯದಲ್ಲೂ ಯುವಜನತೆಯನ್ನು ನಾಚಿಸುವಂತ ಜೀವನೋತ್ಸಾಹ.. ಆರೋಗ್ಯದ ಗುಟ್ಟು ಹೇಳ್ತಾರೆ ಹಾವೇರಿಯ ಅಜ್ಜಿ

Last Updated : Oct 20, 2023, 11:01 PM IST

ABOUT THE AUTHOR

...view details