ಕರ್ನಾಟಕ

karnataka

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ : ಹೈಕೋರ್ಟ್​ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ

By

Published : Aug 31, 2022, 8:55 AM IST

Updated : Aug 31, 2022, 9:13 AM IST

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪಿಸಲು ಹೈಕೋರ್ಟ್​ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಹಿಂದು ಸಂಘಟನೆಗಳು ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಇದರ ವಿರುದ್ಧ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿದೆ.

Hubli Eidgah Maidan
ಗಣೇಶ ಪ್ರತಿಷ್ಠಾಪನೆ

ಹುಬ್ಬಳ್ಳಿ :ಇಲ್ಲಿಯ ಈದ್ಗಾ ಮೈದಾನದ ಗಣೇಶೋತ್ಸವ ಆಚರಣೆ ವಿಚಾರ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ತಡರಾತ್ರಿ ಹೈಕೋರ್ಟ್ ನೀಡಿದ ಆದೇಶ ಪ್ರಶ್ನಿಸಿ ಅಂಜುಮನ್ ಇಸ್ಲಾಂ ಸಂಸ್ಥೆ ಸುಪ್ರೀಂ ಮೆಟ್ಟಿಲು ಏರಿದೆ.

ಹೀಗಾಗಿ ಗಣೇಶ ಮಂಡಳಿ ತರಾತುರಿಯಲ್ಲಿ ಈದ್ಗಾ ಮೈದಾನದ‌ ನಿಗದಿತ ಸ್ಥಳದಲ್ಲಿ ಚಿಕ್ಕ ಮೂರ್ತಿ ಹಾಗೂ ಉತ್ಸವ ಮೂರ್ತಿಯನ್ನು ಪ್ರತಿಪ್ಠಾಪನೆ ಮಾಡಲಾಯಿತು. ಮಧ್ಯಾಹ್ನ 12 ಗಂಟೆಗೆ ಮೂರುಸಾವಿರ ಮಠದಿಂದ ಮೂಲಕ ಗಣೇಶ ಮೂರ್ತಿ ತೆಗೆದುಕೊಂಡು ಬಂದು ಪ್ರತಿಷ್ಟಾಪಿಸುವ ಯೋಜನೆ ಇತ್ತು. ಆದರೆ ಅಂಜುಮನ್ ಸಂಸ್ಥೆ ಸುಪ್ರೀಂ ಮೊರೆ ಕಾರಣದಿಂದ ಸಮಯ ಬದಲಿಸಿ ಬೆಳಗ್ಗೆ 7:30ಕ್ಕೆ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದೆ.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ

ಉತ್ಸವ ಸಮಿತಿ ಅಧ್ಯಕ್ಷ ಸಂಜೀವ್ ಬಡೆಸ್ಕರ್ ನೇತೃತ್ವದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಮಂತ್ರಘೋಷಣೆ ಮುಖಾಂತರ ಪೂಜೆ ಆರಂಭಿಸಲಾಗಿದ್ದು. ಪಾಲಿಕೆ ಸದಸನ ಸಮಿತಿ ಅಧ್ಯಕ್ಷ ಸಂತೋಷ ಚೌಹ್ವಾಣ್ ಸೇರಿ ಹಲವಾರು ಹಿಂದೂ ಸಂಘಟನೆ ಮುಖಂಡರು ಭಾಗಿಯಾಗಿದ್ದು, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ :ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ

Last Updated : Aug 31, 2022, 9:13 AM IST

ABOUT THE AUTHOR

...view details