ಹುಬ್ಬಳ್ಳಿ :ನಗರದಲ್ಲಿಕಳೆದಬುಧವಾರ ತಡರಾತ್ರಿ ನಡೆದ ಇಬ್ಬರು ಯುವಕರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಕೇಶ್ವಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ನಡೆದ 24 ಗಂಟೆಗಳಲ್ಲಿ ಆರೋಪಿಗಳಾದ ಶ್ರೀನಿವಾಸ ಪರಶುರಾಮ ಹಿರೇಕುಂಬಿ (26), ಅವಿನಾಶ ಬಸವರಾಜ ನರಗುಂದ (29), ಸಂಜೀವ ರೇವಣಸಿದ್ದಪ್ಪ ವಡ್ಡರ (28), ಮಧು ಕಲ್ಮೇಶ ಹಾದಿಮನಿ (25) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಹುಬ್ಬಳ್ಳಿ ಗೋಪನಕೊಪ್ಪ ಸಿದ್ರಾಮೇಶ್ವರನಗರದ 3ನೇ ಕ್ರಾಸ್ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಿಯಾಜ ಜೋರಮ್ಮನವರ ಮತ್ತು ಆತನ ಗೆಳೆಯ ಮಂಜುನಾಥ ಕಬ್ಬಿನ ಎಂಬ ಇಬ್ಬರನ್ನು ಕಬ್ಬಿಣದ ರಾಡ್ನಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದರು. ಪ್ರಕರಣದ ಪ್ರಮುಖ ಆರೋಪಿ ಶ್ರೀನಿವಾಸ ಪರಶುರಾಮ ಹಿರೇಕುಂಬಿ ಅಲಿಯಾಸ್ ಸೀನು, ಕೊಲೆಯಾದ ನಿಯಾಜ್ನೊಂದಿಗೆ ಜಗಳವಾಡಿಕೊಂಡಿದ್ದ. ಅದೇ ಕಾರಣಕ್ಕೆ ಗೆಳೆಯರೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇಶ್ವಾಪುರ ಠಾಣೆಯ ಪೊಲೀಸರು, 24 ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.