ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಕಾವು ರಂಗೇರಲಿದೆ.
ಮಹಾನಗರ ಪಾಲಿಕೆ 82 ವಾರ್ಡಿನ ಮೀಸಲಾತಿಯನ್ನ ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದು, ಚುನಾವಣೆಯ ಕಾವು ಏರತೊಡಗಿದೆ.
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಕಾವು ರಂಗೇರಲಿದೆ.
ಮಹಾನಗರ ಪಾಲಿಕೆ 82 ವಾರ್ಡಿನ ಮೀಸಲಾತಿಯನ್ನ ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದು, ಚುನಾವಣೆಯ ಕಾವು ಏರತೊಡಗಿದೆ.
ಈ ಹಿಂದೆ ಮೀಸಲಾತಿ ಗೊಂದಲ ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಸರ್ಕಾರಕ್ಕೆ ಆದಷ್ಟು ಬೇಗ ಮೀಸಲಾತಿಯನ್ನು ಪ್ರಕಟಿಸುವಂತೆ ಸೂಚನೆ ನೀಡಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹು- ಧಾ ಮಹಾನಗರ ಪಾಲಿಕೆಯ ಎಲ್ಲಾ ವಾರ್ಡುಗಳ ಮೀಸಲಾಯಿಯನ್ನು ಪ್ರಕಟಿಸಿದ್ದು, ಈಗ ಚುನಾವಣೆ ಕಾವು ಏರಲಿದೆ.
ಜಾತಿವಾರು ಅಧಾರದ ಮೇಲೆ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು ತೊಡಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.