ಕರ್ನಾಟಕ

karnataka

ETV Bharat / state

ಕೇಂದ್ರ ಬಜೆಟ್​​​ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಹುಬ್ಬಳ್ಳಿ-ಧಾರವಾಡ ಮಂದಿ - ಕೇಂದ್ರ ಬಜೆಟ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. 2020-21ರ ಬಜೆಟ್ ಮಂಡನೆ ಇದಾಗಿದ್ದು, ಕೇಂದ್ರ ಸರ್ಕಾರದ ಪ್ರಸ್ತುತ ವರ್ಷದ ಬಜೆಟ್ ಮೇಲೆ ಉತ್ತರ ಕರ್ನಾಟಕ ಹಾಗೂ ಹುಬ್ಬಳ್ಳಿ-ಧಾರವಾಡದ ಜನತೆ ಕೂಡ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Central budget
ಕೇಂದ್ರ ಬಜೆಟ್

By

Published : Jan 31, 2020, 2:19 PM IST

ಹುಬ್ಬಳ್ಳಿ:ಆರ್ಥಿಕ ಹಿಂಜರಿತ, ಜಿಡಿಪಿ ಕುಸಿತ, ತೆರಿಗೆ ಸಂಗ್ರಹ ಹಾಗೂ ವಿತ್ತೀಯ ಕೊರತೆ, ಹಣದುಬ್ಬರ ಏರಿಕೆ, ಉದ್ಯೋಗ ಸೃಷ್ಟಿಯ ಅನಿವಾರ್ಯತೆ ಸೇರಿದಂತೆ ಹಲವು ಸವಾಲುಗಳ ಮಧ್ಯೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಸಂಸತ್ತಿನಲ್ಲಿ ಎರಡನೇ ಬಜೆಟ್ ಮಂಡಿಸಲಿದ್ದಾರೆ.

ಹುಬ್ಬಳ್ಳಿ-ಧಾರವಾಡ

2020-21ರ ಬಜೆಟ್ ಮಂಡನೆ ಇದಾಗಿದ್ದು, ಸಹಜವಾಗಿ ಈ ಬಾರಿ ಮೋದಿ ಬಜೆಟ್ ಬುಟ್ಟಿಯಲ್ಲಿ ಏನಿದೆ ಎಂದು ದೇಶವಾಸಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಅದರಂತೆ ಕೇಂದ್ರ ಸರ್ಕಾರದ ಪ್ರಸ್ತುತ ವರ್ಷದ ಬಜೆಟ್ ಮೇಲೆ ಉತ್ತರ ಕರ್ನಾಟಕ ಹಾಗೂ ಹುಬ್ಬಳ್ಳಿ-ಧಾರವಾಡದ ಜನತೆ ಕೂಡ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಜಾರಿ:ದಶಕಗಳಿಂದ ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಈ ಬಾರಿಯ ಬಜೆಟ್​​ನಲ್ಲಿ ಅನುದಾನ ಬಿಡುಗಡೆಯಾಗಲಿದೆ ಎಂಬ ಆಶಾಭಾವನೆಯನ್ನು ಹೊಂದಲಾಗಿದೆ. ಕಳೆದ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವಾಗಲಿಲ್ಲ. ಇದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಜೆಟ್​​ನಲ್ಲಿಯಾದ್ರೂ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಈ ಭಾಗದ ಜನರಿದ್ದಾರೆ.

ಮಹದಾಯಿ ಯೋಜನೆಗೆ ಅನುದಾನ ಬಿಡುಗಡೆ:ಉತ್ತರ ‌ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಮಹದಾಯಿ‌ ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂಬ ಒತ್ತಾಯ ‌ಕೇಳಿ ಬಂದಿದೆ. ಆದಷ್ಟು‌ ಬೇಗ ಮಹದಾಯಿ ಯೋಜನೆ ಸಮಸ್ಯೆ ಇತ್ಯರ್ಥಪಡಿಸಿ ಅನುದಾನ ಮೀಸಲಿಡುವ ನಿರೀಕ್ಷೆ ಇದೆ.

ಜವಳಿ ಪಾರ್ಕ್:ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಹತ್ತಿ ಬೆಳೆಯಲಾಗುತ್ತಿದೆ. ಏಷ್ಯಾದ ಅತೀ ದೊಡ್ಡ ಹತ್ತಿ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹಾವೇರಿಗೆ ಇದೆ. ಆದರೆ ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಕಾಟನ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಬೇಕು ಎಂಬ ಒತ್ತಾಯವಿದೆ. ಹತ್ತಿ ಖರೀದಿ ಕೇಂದ್ರ, ನೂಲು ತಯಾರಿಕೆ, ರೆಡಿಮೆಡ್ ಬಟ್ಟೆ ತಯಾರಿಕೆ ಸೇರಿದಂತೆ ಕಚ್ಚಾ ಉತ್ಪನ್ನಗಳಿಗೆ ಒಂದೇ ಸೂರಿನಲ್ಲಿ ಜವಳಿ ಪಾರ್ಕ್ ಘೋಷಣೆ ಮಾಡುವ ನಿರೀಕ್ಷೆ ಇದೆ. ಈ ಭಾಗದ ರೈತರ ಬಹುದಿನದ ಬೇಡಿಕೆ ಉಳ್ಳಾಗಡ್ಡಿ- ಮೆಣಸಿನಕಾಯಿ ಶೇಖರಣೆ ಮತ್ತು ಸಂಸ್ಕರಣೆಯ ದೊಡ್ಡ ಘಟಕ ಸ್ಥಾಪನೆ ನಿರೀಕ್ಷೆ ‌ಇದೆ.

ಮೋನೋ ರೈಲು:ವಾಣಿಜ್ಯ ‌ನಗರಿ ದಿನದಿಂದ ‌ದಿನಕ್ಕೆ ಬೆಳೆಯುತ್ತಿದೆ. ಹುಬ್ಬಳ್ಳಿ-ಧಾರವಾಡ ನಡುವೇ ಸಂಪರ್ಕ ಕಲ್ಪಿಸಲು ಮೋನೋ ರೈಲು ಪ್ರಸ್ತಾವನೆ ಹಲವು ವರ್ಷಗಳಿಂದ ನೀಡಲಾಗುತ್ತದೆ. ಆದ್ರೆ ಅದು ನನೆಗುದಿಗೆ ಬೀಳುತ್ತಲೇ ಬಂದಿದೆ.‌ ಬಿಆರ್​ಟಿಎಸ್ ಯೋಜನೆಗೂ‌ ಮೊದಲೇ ಈ ಯೋಜನೆ ಪ್ರಸ್ತಾವನೆ ಕೇಂದ್ರದ ಮುಂದಿದೆ. ಈ ಬಾರಿಯಾದರೂ ಮೋನೋ ರೈಲು ಈ ಬಜೆಟ್​​​ನಲ್ಲಿ ಘೋಷಣೆಯ ನಿರೀಕ್ಷೆ ಇದೆ.

ಪ್ಲೈಓವರ್:ಹುಬ್ಬಳ್ಳಿ-ಧಾರವಾಡದಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ‌ವಾಹನ ಸವಾರರು‌‌ ಪರದಾಡುವಂತಾಗಿದೆ. ಹೀಗಾಗಿ ಅವಳಿ‌ನಗರದ ಪ್ರಮುಖ ವೃತ್ತಗಳಲ್ಲಿ ಪ್ಲೈ ಓವರ್ ನಿರ್ಮಾಣಕ್ಕೆ ಕೇಂದ್ರದ ಅನುದಾನದ ನಿರೀಕ್ಷೆ ಇದೆ. ಕೇಂದ್ರ ಸರ್ಕಾರದ ಅನುದಾನಕ್ಕೆ ಸಾಕಷ್ಟು ಬಾರಿ ಪ್ರಸ್ತಾವನೆ ಕಳುಹಿಸಲಾಗಿದೆ. ಅದರ ಜೊತೆಗೆ ರಿಂಗ್ ರೋಡ್​ಗೆ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ.

ABOUT THE AUTHOR

...view details