ಧಾರವಾಡ: ಬೆಂಗಳೂರು, ಮೈಸೂರು ನಂತರ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಸ್ವಚ್ಛತೆಗಾಗಿ ಪಾಲಿಕೆ ವಿವಿಧ ಕ್ರಮಕೈಗೊಂಡಿದೆ. ಇದೀಗ ವಿನೂತನ ಕಾರ್ಯಕ್ರಮ ರೂಪಿಸಿದ್ದು, ಕಸ ಹಾಕುವಲ್ಲಿ ರಂಗೋಲಿ ಬಿಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ಜನರು ಪಾಲಿಕೆ ವಾಹನದಲ್ಲಿ ಕಸ ಹಾಕದೇ ಬಯಲಿನಲ್ಲಿ ಎಸೆಯುತ್ತಿರುವುದನ್ನು ಗಮನಿಸಿದ ಪಾಲಿಕೆ ಅಧಿಕಾರಿಗಳು, ರಂಗೋಲಿ ಬಿಡಿಸುವ ಮೂಲಕ ವಿನೂತನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.
ಧಾರವಾಡ ವಲಯದ 12 ಮಂದಿ ಅಧಿಕಾರಿಗಳು, ಪೌರ ಕಾರ್ಮಿಕರು ಮಾಳಮಡ್ಡಿ ವೆಂಕಟೇಶ್ವರ ದೇವಸ್ಥಾನದ ಹತ್ತಿರದ ಬಯಲು ಜಾಗದಲ್ಲಿ ಎಸೆದ ಕಸ ಸ್ವಚ್ಛಗೊಳಿಸಿ, ಅಲ್ಲಿ ರಂಗೋಲಿ ಬಿಡಿಸುವ ಮೂಲಕ ಕಸ ಎಸೆಯದಂತೆ ಅರಿವು ಮೂಡಿಸಿದ್ದಾರೆ.