ಕರ್ನಾಟಕ

karnataka

ETV Bharat / state

ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಯ್ತ್‌ರೀ.. ಸೆಪ್ಟೆಂಬರ್ 3ಕ್ಕೆ ನಿಗದಿ ನೋಡ್ರೀ..

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯು ಕಳೆದ ಮೂರು ವರ್ಷದಿಂದ ನೆನಗುದಿಗೆ ಬಿದ್ದಿತ್ತು. ಆದರೀಗ, ಚುನಾವಣೆ ಪ್ರಕ್ರಿಯೆಗಳಿಗೆ ಚಾಲನೆ ದೊರಕುತ್ತಿರುವುದರಿಂದ ಹೊಸ ಅಲೆ ಆರಂಭವಾಗಲಿದೆ..

hubli-dharwad-municipal-corporation
ಹು-ಧಾ ಮಹಾನಗರ ಪಾಲಿಕೆ

By

Published : Aug 11, 2021, 3:22 PM IST

ಹುಬ್ಬಳ್ಳಿ :ಸುಮಾರು ಮೂರು ವರ್ಷಗಳಿಂದ ಚುನಾಯಿತ ಜನಪ್ರತಿನಿಧಿಗಳಿಲ್ಲದೇ ಅಧಿಕಾರ ನಡೆಸಿಕೊಂಡು ಬಂದಿದ್ದ ಹು-ಧಾ ಮಹಾನಗರ ಪಾಲಿಕೆಗೆ ಅಂತೂ ಚುನಾವಣೆ ನಿಗದಿಯಾಗಿದೆ.

ಬಹು ದಿನಗಳಿಂದ ಚರ್ಚೆಯಾಗುತ್ತಿದ್ದ ಮಹಾನಗರ ಪಾಲಿಕೆಯ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಹಸಿರು ನಿಶಾನೆ ತೋರಿಸಿದೆ. ಆಗಸ್ಟ್ 16ಕ್ಕೆ ಜಿಲ್ಲಾಧಿಕಾರಿಗಳು ಚುನಾವಣೆಯ ಅಧಿಸೂಚನೆ ಹೊರಡಿಸಲಿದ್ದಾರೆ.

ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಘೋಷಣೆ

ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಗೆ ಹಸಿರು ನಿಶಾನೆ ತೋರಿಸಲಾಗಿದೆ. ಸೆಪ್ಟಂಬರ್ 3ಕ್ಕೆ ಚುನಾವಣೆ ನಡೆಯಲಿದ್ದು, ಸೆಪ್ಟಂಬರ್ 6ಕ್ಕೆ ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಆಗಸ್ಟ್ 16ರಿಂದ ಆರಂಭವಾಗಲಿದ್ದು, ಆ.23ಕ್ಕೆ ಕೊನೆಯಾಗಲಿದೆ.

ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಘೋಷಣೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯು ಕಳೆದ ಮೂರು ವರ್ಷದಿಂದ ನೆನಗುದಿಗೆ ಬಿದ್ದಿತ್ತು. ಆದರೀಗ, ಚುನಾವಣೆ ಪ್ರಕ್ರಿಯೆಗಳಿಗೆ ಚಾಲನೆ ದೊರಕುತ್ತಿರುವುದರಿಂದ ಹೊಸ ಅಲೆ ಆರಂಭವಾಗಲಿದೆ.

ಓದಿ:ಆನಂದ್ ಸಿಂಗ್​ಗೆ ಸಿಎಂ ಬುಲಾವ್: ಚರ್ಚೆ ಬಳಿಕ ಹೈಕಮಾಂಡ್ ಜೊತೆ ಮಾತುಕತೆ ಎಂದ ಬೊಮ್ಮಾಯಿ

ABOUT THE AUTHOR

...view details