ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳದ ವಸ್ತು ಸ್ಥಿತಿ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಲಾಗುವುದು. ಅಲ್ಲಿಯವರೆಗೆ ಸಂಘಟನೆಗಳು ಮೊದಲಿನಂತೆ ಎಲ್ಲಾ ಇಲಾಖೆಯ ಪೂರ್ವಾನುಮತಿ ಪಡೆಯಬೇಕು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಮೀಷನರ್ ಡಾ ಗೋಪಾಲಕೃಷ್ಣ ಹೇಳಿದರು.
ನಗರದಲ್ಲಿಂದು ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಅವಕಾಶ ನೀಡಬೇಕು ಎಂದು ಮನವಿ ಕುರಿತು ಮಾತನಾಡಿದ ಅವರು, ಆದಷ್ಟು ಶೀಘ್ರವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಎಲ್ಲಾ ಇಲಾಖೆ ಒಳಗೊಂಡು ಏಕಗವಾಕ್ಷಿಯನ್ನು ಆರಂಭಿಸುತ್ತೇವೆ. ಇದರಿಂದಲೇ ಎಲ್ಲಾ ಸಮಿತಿಗಳು ಅನುಮತಿ ಪಡೆಯಬೇಕು ಎಂದರು.