ಕರ್ನಾಟಕ

karnataka

ETV Bharat / state

ಹೆಚ್ಚು ಸ್ಥಾನ ಗೆದ್ದರೂ ಬಿಜೆಪಿಗೆ ನುಂಗಲಾರದ ತುತ್ತಾದ ಹು-ಧಾ ಪಾಲಿಕೆ ಉಪಮೇಯರ್ ಆಯ್ಕೆ! - ಉಪಮೇಯರ್ ಆಯ್ಕೆ ಪ್ರಕ್ರಿಯೆಗೆ ಮೀಸಲಾತಿ ಘೋಷಣೆ

ಉಪಮೇಯರ್ ಆಯ್ಕೆ ಪ್ರಕ್ರಿಯೆಗೆ ಮೀಸಲಾತಿ ಘೋಷಣೆಯಾಗಿದೆ. ಎಸ್‌ಸಿ ಮಹಿಳೆಗೆ ಸ್ಥಾನ ಮೀಸಲಾಗಿದ್ದು, ಹು-ಧಾ ಪಾಲಿಕೆಯಲ್ಲಿ ಬಿಜೆಪಿ ಗೆದ್ದಿರುವ 39 ಸ್ಥಾನಗಳಲ್ಲಿ ಒಂದೇ ಒಂದು ಅಭ್ಯರ್ಥಿ ಕೂಡ ಎಸ್​ಸಿ ಮಹಿಳಾ ಅಭ್ಯರ್ಥಿ ಇಲ್ಲದಿರುವುದು ಕಮಲಪಾಳಯಕ್ಕೆ ತಲೆನೋವಾಗಿದೆ. ಇದರಿಂದ ಬಂಡಾಯ ಎದ್ದು ಪಕ್ಷೇತರವಾಗಿ ನಿಂತಿರುವ ಅಭ್ಯರ್ಥಿಗಳಿಗೆ ಮಣೆ ಹಾಕುವ ಅನಿವಾರ್ಯತೆ ಕಮಲಕ್ಕೆ ಬಂದೊದಗಿದೆ.

hubli-dharwad-municipal-corporation-bjp-deputy-mayor
ಹು-ಧಾ ಪಾಲಿಕೆ ಉಪಮೇಯರ್

By

Published : Sep 9, 2021, 7:02 PM IST

ಹುಬ್ಬಳ್ಳಿ:ಸಾಕಷ್ಟು ತಂತ್ರಗಾರಿಕೆ ಹೆಣೆದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಹೆಚ್ಚು ಸ್ಥಾನ ಗೆದ್ದರೂ ಕಮಲ ಪಡೆಗೆ ಉಪಮೇಯರ್ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ಉಪಮೇಯರ್ ಆಯ್ಕೆ ಪ್ರಕ್ರಿಯೆಗೆ ಮೀಸಲಾತಿ ಘೋಷಣೆಯಾಗಿದೆ. ಎಸ್‌ಸಿ ಮಹಿಳೆಗೆ ಸ್ಥಾನ ಮೀಸಲಾಗಿದ್ದು, ಬಿಜೆಪಿಯ 39 ಸ್ಥಾನಗಳಲ್ಲಿ ಒಂದೇ ಒಂದು ಅಭ್ಯರ್ಥಿ ಕೂಡ ಎಸ್​ಸಿ ಮಹಿಳಾ ಅಭ್ಯರ್ಥಿ ಇಲ್ಲದಿರುವುದು ಬಿಜೆಪಿಗೆ ತಲೆನೋವಾಗಿದೆ. ಅಲ್ಲದೇ ಪಕ್ಷೇತರ ಹಾಗೂ ಬಂಡಾಯ ಅಭ್ಯರ್ಥಿಗಳಿಗೆ ಮಣೆ ಹಾಕಬೇಕಿದ್ದ ಬಿಜೆಪಿಯ ಕಾರ್ಯ ಎಲ್ಲೊ ಕೊಂಚಮಟ್ಟಿಗೆ ಪ್ರಾರಂಭದಲ್ಲಿಯೇ ಮುಗ್ಗರಿಸಿದಂತಾಗಿದೆ.

ಬಿಜೆಪಿಗೆ ನುಂಗಲಾರದ ತುತ್ತಾದ ಹು-ಧಾ ಪಾಲಿಕೆ ಉಪಮೇಯರ್ ಆಯ್ಕೆ..!

ಪಕ್ಷೇತರರಾಗಿ ಚುನಾವಣೆಗೆ ನಿಂತು ಆಯ್ಕೆಯಾಗಿರುವ ದುರ್ಗಮ್ಮ ಬಿಜವಾಡ ಮೂಲತಃ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಆದ್ರೆ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಇನ್ನೋರ್ವ ಮಹಿಳಾ ಅಭ್ಯರ್ಥಿ ಚಂದ್ರಕಲಾ ವೆಂಕಟೇಶ ಮೇಸ್ತ್ರಿ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೂ ಸಿಗದ ಹಿನ್ನೆಲೆ ಬಂಡಾಯ ಎದ್ದು ಸ್ಪರ್ಧೆ ಮಾಡಿದ್ದರು. ಚಂದ್ರಕಲಾ ಅವರ ಪತಿ ವೆಂಕಟೇಶ ಮೇಸ್ತ್ರಿ ಈ ಹಿಂದೆ ಬಿಜೆಪಿಯ ಮಾಜಿ ಮೇಯರ್ ಆಗಿದ್ದವರು. ಕಳೆದ ಎರಡು ವರ್ಷಗಳ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಸದ್ಯ ಬಂಡಾಯ ಎದ್ದು ಪಕ್ಷ ತೊರೆದ ಇಬ್ಬರಿಗೆ ಮಣೆ ಹಾಕಬೇಕಾದ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ.

ಈಗಾಗಲೇ ಪಕ್ಷೇತರ ಅಭ್ಯರ್ಥಿಗಳು ಮಾತ್ರ ತಮ್ಮ ಪಟ್ಟು ಬಿಟ್ಟು ಕೊಟ್ಟಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದುರ್ಗಮ್ಮ ಬಿಜವಾಡ ಪತಿ ಶಶಿಕಾಂತ್ ಬಿಜವಾಡ ಎರಡು ರಾಷ್ಟ್ರೀಯ ಪಕ್ಷಗಳನ್ನು ಹಿಂದಿಕ್ಕಿ ಜನರು ಆಶೀರ್ವಾದ ಮಾಡಿದ್ದಾರೆ. ಅವರ ನಿರ್ಧಾರವೇ ನಮ್ಮ ನಿರ್ಧಾರ ಎಂದು ಹೇಳುವ ಮೂಲಕ ತಮ್ಮ ನಿರ್ಧಾರ ಬಿಟ್ಟು ಕೊಟ್ಟಿಲ್ಲ. ಇನ್ನೂ ವೆಂಕಟೇಶ ಮೇಸ್ತ್ರಿ ಅವರು ಸ್ಪಷ್ಟವಾದ ನಿರ್ಧಾರ ತೆಗೆದುಕೊಂಡಿಲ್ಲ. ‌ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ABOUT THE AUTHOR

...view details