ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ಜನ ಮತ್ತೊಂದು ಸಂಕಷ್ಟದ ಸುಳಿಗೆ ಸಿಲುಕಿಕೊಳ್ಳುವ ಸಾಧ್ಯತೆ ನಿಚ್ಚಳವಾದಂತಿದೆ. ಕೋವಿಡ್‌ನಿಂದ ಜನ ಇನ್ನೇನು ಕೊಂಚ ಚೇತರಿಸಿಕೊಳ್ಳುತ್ತಿದ್ದಂತೆ ಪಾಲಿಕೆ ಹೊಸ ರಾಗ ಶುರು ಮಾಡಿದೆ. ಅಭಿವೃದ್ಧಿ ಹೆಸರಿನಲ್ಲಿ ಆಸ್ತಿ ಕರದ ದರವನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚಿದೆ.
ಬೆಲೆ ಏರಿಕೆ ಮಧ್ಯೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರಿಗೆ ತೆರಿಗೆ ಭಾರದ ಆತಂಕ - property tax
ಕೋವಿಡ್‌ನಿಂದ ಕಂಗಾಲಾದ ಜನರ ಮೇಲೆ ಇದೀಗ ಮತ್ತೊಂದು ಭಾರ ಹೊರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹೊಸ ತೆರಿಗೆ ಸಾರ್ವಜನಿಕರ ನಿದ್ದೆಗೆಡಿಸಿದೆ. ಜೀವನ ನಿರ್ವಹಣೆಯೇ ಸದ್ಯದ ಸ್ಥಿತಿಯಲ್ಲಿ ಕಷ್ಟಕರವಾಗಿರುವಾಗ,ಆಸ್ತಿ ಕರ ಕಿರಿಕಿರಿ ಪ್ರಾರಂಭವಾಗುತ್ತಿದೆ. ರೊಚ್ಚಿಗೆದ್ದಿರುವ ಜಂಟಿಸಿಟಿಯ ಮಂದಿ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ತೆರಿಗೆ ಭಾರದ ಆತಂಕ
ಈ ಹಿನ್ನೆಲೆ ಪಾಲಿಕೆ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದು ಕಾರ್ಪೋರೇಷನ್‌ಗಳಿಗೆ ಮಾರ್ಗಸೂಚಿಗಳನ್ನು ರವಾನಿಸಿದೆ. ಪ್ರತೀ ಮೂರು ವರ್ಷಕ್ಕೊಮ್ಮೆ ಮಾತ್ರ ಆಸ್ತಿದರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಹಾಗಾಗಲ್ಲ, ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದಿದೆ. ಪರಿಣಾಮ, ಯಾವಾಗ ಬೇಕಾದರೂ, ಆಸ್ತಿ ದರ ಹೆಚ್ಚಾಗುವ ಸಾಧ್ಯತೆ ಇದೆ. ಈ ಕುರಿತು ಪಾಲಿಕೆ ಆಯುಕ್ತರು ಪ್ರತಿಕ್ರಿಯಿಸಿದ್ದಾರೆ.
ಕಳೆದ ವರ್ಷವಷ್ಟೇ,ಹುಬ್ಬಳ್ಳಿ-ಧಾರವಾಡದ ಮಹಾನಗರದ ಆಸ್ತಿಕರವನ್ನು ಹೆಚ್ಚಿಸಲಾಗಿತ್ತು. ಈ ವರ್ಷ ಮತ್ತೆ ಹೆಚ್ಚು ಮಾಡಿದ್ರೆ ಹೇಗೆ ಅನ್ನೋ ಜಿಜ್ಞಾಸೆಯಲ್ಲಿ ಜನರಿದ್ದಾರೆ. ಕಾಸಿಲ್ಲದ ಕಾರ್ಪೋರೇಷನ್ ಕೈಲಾಸ ಮಾಡುವ ಕನಸು ಕಾಣುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.