ಹುಬ್ಬಳ್ಳಿ: ಲಾಕ್ಡೌನ್ನಿಂದ ಕಂಗಾಲಾಗಿರುವ ಹುಬ್ಬಳ್ಳಿ-ಧಾರವಾಡದ ಜನತೆಗೆ ಮಹಾನಗರ ಪಾಲಿಕೆ ಮತ್ತೊಂದು ಬಿಗ್ ಶಾಕ್ ನಿಡಿದೆ.
ಆಸ್ತಿ ತೆರಿಗೆ ಹೆಚ್ಚಳ: ಅವಳಿ ನಗರದ ಜನತೆಗೆ ಬಿಗ್ ಶಾಕ್ ಕೊಟ್ಟ ಮಹಾನಗರ ಪಾಲಿಕೆ! - Hubli Dharwad Muncipal Corporation
ಹುಬ್ಬಳ್ಳಿ-ಧಾರವಾಡದ ಜನತೆಗೆ ಮಹಾನಗರ ಪಾಲಿಕೆ ಭಾರೀ ಶಾಕ್ ನೀಡಿದ್ದು, ಆಸ್ತಿ ತೆರಿಗೆಯನ್ನು ಶೇ. 30ರಷ್ಟು ಹೆಚ್ಚಳ ಮಾಡಿದೆ.
![ಆಸ್ತಿ ತೆರಿಗೆ ಹೆಚ್ಚಳ: ಅವಳಿ ನಗರದ ಜನತೆಗೆ ಬಿಗ್ ಶಾಕ್ ಕೊಟ್ಟ ಮಹಾನಗರ ಪಾಲಿಕೆ! Tax hike](https://etvbharatimages.akamaized.net/etvbharat/prod-images/768-512-7269332-673-7269332-1589950531314.jpg)
ಮಹಾನಗರ ಪಾಲಿಕೆ
ಆಸ್ತಿ ತೆರಿಗೆಯನ್ನು ಶೇ. 30ರಷ್ಟು ಹೆಚ್ಚಳ ಮಾಡಿದೆ. ಅವಳಿ ನಗರದ ಜನತೆ ಕೊರೊನಾ ಲಾಕ್ಡೌನ್ನಿಂದ ಚೇತರಿಸಿಕೊಳ್ಳುವ ಮುನ್ನವೇ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಬಿಗ್ ಶಾಕ್ ನೀಡಿದೆ.
ಮೇ. 16ರಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ ತೆರಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ. ಅದರಲ್ಲಿ 2020-2021ನೇ ಸಾಲಿನ ಆಸ್ತಿ ತೆರಿಗೆಯನ್ನು ರಾಜ್ಯ ಸರ್ಕಾರದ ಆದೇಶದ ಅನ್ವಯ ಕಡ್ಡಾಯವಾಗಿ ಪರಿಷ್ಕರಣೆ ಮಾಡಿದ್ದು, ಏಪ್ರಿಲ್ ಒಂದರಿಂದಲೇ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ ಎಂದು ಅಧಿಸೂಚನೆ ಹೊರಡಿಸಿದ್ದಾರೆ.