ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸ್ವಚ್ಛತೆಗಾಗಿ 193 ಆಟೋ, ಟಿಪ್ಪರ್ಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಆಟೋ ಮತ್ತು ಟಿಪ್ಪರ್ ಚಾಲಕರು ತಮ್ಮ ವೇತನ ಪಡೆಯಲು ಪ್ರತಿ ತಿಂಗಳು ಮೂರು ಸಾವಿರ ರೂ ಕಮಿಷನ್ ಕೊಡಬೇಕಾಗಿತ್ತು ಎಂಬ ಆರೋಪ ಕೇಳಿಬಂದಿದೆ. ವೇತನದಲ್ಲಿಯೂ ಕೂಡ ಬಹುದೊಡ್ಡ ಹಗರಣ ನಡೆದಿದ್ದು, ಚಾಲಕರಿಗೆ 22,505 ರೂ. ವೇತನ ನೀಡಬೇಕಿತ್ತು. ಆದ್ರೆ ಅವರಿಗೆ ಕೇವಲ 14 ಸಾವಿರ ಕೊಡಲಾಗ್ತಿದ್ದು, ಅದರಲ್ಲಿ 3,000 ಕಮಿಷನ್ಗಾಗಿ ಮೊದಲೇ ಕಟ್ ಆಗುತ್ತಿತ್ತು.
ಇದರಿಂದ ಚಾಲಕರು ಕಮಿಷನ್ ಕರಾಳ ದಂಧೆಗೆ ಬೇಸತ್ತಿದ್ದರು. ಈ ಬಗ್ಗೆ ಆಟೋ, ಟಿಪ್ಪರ್ ಚಾಲಕರು ಪಾಲಿಕೆ ಆಯುಕ್ತರು ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಆಯುಕ್ತರು ನೀಡಿದ್ದಾರೆ.