ಧಾರವಾಡ: ಪ್ರಖ್ಯಾತಿ ಮತ್ತು ಕುಖ್ಯಾತಿಗಳೆರಡನ್ನೂ ಶ್ರೇಣೀಕೃತ ಹಂತದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿರುವ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಒಂದಿಲ್ಲೊಂದು ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆ.
ಈಗಾಗಲೇ ಅವಳಿನಗರದಲ್ಲಿ ಗಾಂಜಾ ಘಾಟಿನ ಜಾಡನ್ನು ಹಿಡಿದು ಹಲವು ಕಾರ್ಯಾಚರಣೆ ನಡೆಸಿದ ಪೊಲೀಸ್ ಕಮೀಷನರೇಟ್ ಕಾಲೇಜು ಪ್ರಾರಂಭದ ದಿನಗಳಲ್ಲಿ ಗಾಂಜಾ ಮಾರಾಟದ ಬಗ್ಗೆ ವಿಶೇಷ ನಿಗಾ ಇಟ್ಟಿದೆ. ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿರುವ ಬಹುತೇಕ ಪ್ರಕರಣವನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿರುವ ಹು-ಧಾ ಪೊಲೀಸ್ ಕಮೀಷನರೇಟ್ ಗಾಂಜಾ ಮಾರಾಟಕ್ಕೆ ಮತ್ತು ಸೇವನೆಗೆ ಕಡಿವಾಣ ಹಾಕಿ ಅವಳಿನಗರವನ್ನು ಗಾಂಜಾ ಮುಕ್ತ ನಗರವನ್ನಾಗಿ ಮಾಡಲು ನಿರ್ಧಾರ ಮಾಡಿದೆ.
ಕೆ.ರಾಮರಾಜನ್, ಕಾನೂನು ಸುವ್ಯವಸ್ಥೆ ಡಿಸಿಪಿ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಉಪನಗರ ಪೊಲೀಸ್ ಠಾಣೆ ಪೊಲೀಸರು ಭೇದಿಸಿದ್ದ ಗಾಂಜಾ ಪ್ರಕರಣದಲ್ಲಿ ಗದಗ ಮೂಲದ ವಿದ್ಯಾರ್ಥಿಗಳು ಭಾಗಿಯಾಗಿರುವುದನ್ನು ಗಮನಿಸಿದ ಪೊಲೀಸ್ ಕಮೀಷನರೇಟ್ ಗಾಂಜಾ ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಮಾದಕ ವ್ಯಸನದಿಂದ ಜೀವನ ಹಾಳು ಮಾಡಿಕೊಳ್ಳುತ್ತಿರುವವರಿಗೆ ಅರಿವು ಮೂಡಿಸಿ ಸಾಮಾಜಿಕ ಜಾಗೃತಿಗೆ ಕಮೀಷನರೇಟ್ ಮುಂದಾಗಿದೆ. ವಾಣಿಜ್ಯನಗರಿಯಲ್ಲಿ ಕಳೆದ ಕೆಲವು ದಿನಗಳಿಂದ ಖೋಟಾ ನೋಟು ಹಾವಳಿ ಹೆಚ್ಚಾಗಿದ್ದು, ಕಡಿವಾಣಕ್ಕೆ ಚಿಂತನೆ ನಡೆಸಿದೆ.
ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಖೋಟಾ ನೋಟು ಜಾಲವನ್ನು ಪೊಲೀಸರು ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ಬಂಧನ ಮಾಡಿದ್ದರು. ಹುಬ್ಬಳ್ಳಿಯ ಕೇಶ್ವಾಪೂರ ಠಾಣೆ ವ್ಯಾಪ್ತಿಯಲ್ಲಿ 04 ಜನರು ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಕಾರ್ಯಾಚರಣೆ ಮಾಡಿ ಜಾಲವನ್ನು ಪತ್ತೆ ಹಚ್ಚಿದ್ದರು.