ಕರ್ನಾಟಕ

karnataka

ETV Bharat / state

ರಾಮ ಜನ್ಮಭೂಮಿ ಹೋರಾಟ ಪ್ರಕರಣ: ಆರೋಪಿ ಬಂಧನ ಕುರಿತು ಹು-ಧಾ ಪೊಲೀಸ್ ಆಯುಕ್ತರು ಹೇಳಿದ್ದೇನು? - ಆರೋಪಿಗಳ ಬಂಧನ ಪ್ರಕರಣ

ಲಾಂಗ್ ಪೆಂಡಿಂಗ್ ಪ್ರಕರಣದ ಆರೋಪಿಯ ಬಂಧನ ಬಗ್ಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್​ ಮಾಹಿತಿ ನೀಡಿದ್ದಾರೆ.

Police Commissioner
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್

By ETV Bharat Karnataka Team

Published : Jan 1, 2024, 8:46 PM IST

Updated : Jan 2, 2024, 1:10 PM IST

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್​

ಹುಬ್ಬಳ್ಳಿ:''ರಾಮ ಜನ್ಮಭೂಮಿ ಹೋರಾಟದ ಪ್ರಕರಣ ಅಂತ ಏನು ಪ್ರತ್ಯೇಕವಾಗಿಲ್ಲ. ಲಾಂಗ್ ಫೆಂಡಿಂಗ್ ಕೇಸ್​ನಂತೆಯೇ ಇದರಲ್ಲಿಯೂ ಕೂಡ ಕೋರ್ಟ್ ನಿರ್ದೇಶನದ ಮೂಲಕ ಆರೋಪಿ ಒಬ್ಬನನ್ನು ದಸ್ತಗಿರಿ ಮಾಡಲಾಗಿದೆ. ಇದರಲ್ಲಿ ಯಾವುದೇ ಸರ್ಕಾರದ ಒತ್ತಡ ಇಲ್ಲ'' ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್​ ಹೇಳಿದರು.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಲಾಂಗ್ ಪೆಂಡಿಂಗ್ ಕೇಸ್ ಪತ್ತೆ ಹಚ್ಚುವುದು ಈ ಬಗ್ಗೆ ಕ್ರಮಗಳನ್ನು ಜರುಗಿಸುವುದು ಸಾಮಾನ್ಯ ಪ್ರಕ್ರಿಯೆ. ಇದರಲ್ಲಿ ಏನೂ ವಿಶೇಷತೆ ಇಲ್ಲ. ಇದು ಎಲ್ಲಾ ಜಿಲ್ಲೆಯಲ್ಲಿಯೂ ಕೂಡ ನಡೆಯುತ್ತದೆ. ಸುಮಾರು 20, 25, 30 ವರ್ಷಗಳ ಹಳೆ ಪ್ರಕರಣಗಳನ್ನು ಚೀಟಿಂಗ್, ಡ್ರಗ್ಸ್, ರಾಬರಿ ಕೇಸ್ ಸಂಬಂಧಿಸಿದಂತೆ ಪ್ರಕರಣ ಪತ್ತೆ ಮಾಡಿದ್ದೇವೆ. ಅದರಂತೆ ಕೋರ್ಟ್ ನಿರ್ದೇಶನದ ಮೇರೆಗೆ ಎಲ್ಒಪಿಗಳನ್ನು ಪತ್ತೆ ಮಾಡಲಾಗುತ್ತದೆ'' ಎಂದು ತಿಳಿಸಿದರು.

ಸರ್ಕಾರದ ಒತ್ತಡದ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಇದರಲ್ಲಿ ಯಾವುದೇ ರೀತಿಯ ಒತ್ತಡ ಇರುವುದಿಲ್ಲ. ಇದೆಲ್ಲವೂ ಪೊಲೀಸ್ ಇಲಾಖೆಯಲ್ಲಿ ಕೋರ್ಟ್ ನಿರ್ದೇಶನದ ಮೇರೆಗೆ ನಡೆಯುವ ಸಾಮಾನ್ಯ ಪ್ರಕ್ರಿಯೆಯಾಗಿದೆ'' ಎಂದು ಅವರು ಮಾಹಿತಿ ನೀಡಿದ್ದಾರೆ.

31 ವರ್ಷಗಳ ಬಳಿಕ ಆರೋಪಿ ಬಂಧನ:ರಾಮ ಮಂದಿರ ಹೋರಾಟದ ಸಂದರ್ಭದಲ್ಲಿ ಕರಸೇವೆಗೂ ಮುನ್ನ ಡಿಸೆಂಬರ್ 5, 1992 ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ ಸಂಭವಿಸಿತ್ತು. ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಈ‌ ಪ್ರಕರಣದಲ್ಲಿ 9 ಜನರ ವಿರುದ್ಧ ಶಹರ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ 31 ವರ್ಷದ ಬಳಿಕ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಮಜನ್ಮಭೂಮಿ ಹೋರಾಟ ಪ್ರಕರಣ

ರಾಜೀವ್ ಧರ್ಮದಾಸ್ ಹೇಳಿದ್ದೇನು?:''ರಾಮಜನ್ಮ ಭೂವಿಗಾಗಿ‌ ನಾವು 1989 ರಿಂದಲೂ ಹೋರಾಟ ಮಾಡುತ್ತ‌ ಬಂದಿದ್ದೆವು. 1992ರಲ್ಲಿಯೂ ನಾವು ಬಂಧನಕ್ಕೆ‌ ಒಳಗಾಗಿದ್ದೆವು. ಈಗಿರುವ ನಾಯಕರೆಲ್ಲ. ಈ ಹೋರಾಟದ ಬಗ್ಗೆ ಏನು ಗೊತ್ತಿಲ್ಲ. ನಮ್ಮ ಬಗ್ಗೆ ಅವರಿಗೆ ಕಾಳಜಿಯೂ ಇಲ್ಲ. ಈಗ ಮತ್ತೆ ಶಹರ ಠಾಣೆ ಪೊಲೀಸರು ಠಾಣೆಗೆ ಕರೆದು ವಿಚಾರಣೆ ಮಾಡಿದ್ದಾರೆ. ಎಸಿಪಿ ಸಾಹೇಬರು ನಿಮ್ಮ ಮೇಲೆ ಹಳೇ ಕೇಸ್ ಇದೆ ಎಂದರು. ಅದ್ರೆ ಎಲ್ಲಾ ಕೇಸ್​ಗಳು ಮುಗಿದಿವೆ ಎಂದು ಅವರನ್ನು ಪ್ರಶ್ನಿಸಿದರೆ, ಇಲ್ಲ ಕೇಸ್ ಬಾಕಿ ಇದೆ ಅವರು ತಿಳಿಸಿದರು. ಈ‌ ಹಿಂದೆ 2017ರಲ್ಲಿ ಪಾಟೀಲ್ ಎಂಬ ಪೊಲೀಸ್ ಅಧಿಕಾರಿ ಸೂಚನೆಯಂತೆ ನಿರೀಕ್ಷಣಾ ಜಾಮೀನು ಕೊಟ್ಟಿರುವುದಾಗಿ ಈಗಿನ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ'' ಎಂದು ಜಾಮೀನು ಪಡೆದುಕೊಂಡಿರುವ ರಾಜೀವ್​ ಧರ್ಮದಾಸ್ ತಿಳಿಸಿದರು.

ಇದನ್ನೂ ಓದಿ:ರಾಮಭಕ್ತರನ್ನು ಬಂಧಿಸುವ ಮೂಲಕ ಸರ್ಕಾರದಿಂದ ದ್ವೇಷ ರಾಜಕಾರಣ: ಆರ್. ಅಶೋಕ್

ವಿಧಾನಸೌಧದಲ್ಲಿ ಇಂದು ಮಾತನಾಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು, ''ರಾಮ ಮಂದಿರ ನಿರ್ಮಾಣ ಚರಿತ್ರೆಯಲ್ಲಿ ದಾಖಲಾಗುವ ಐತಿಹಾಸಿಕ ಕ್ಷಣ. ನಾವು ಕರಸೇವೆ ಮಾಡಿದ್ದೇವೆ, ಹಲವರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಈಗ ಕರಸೇವಕರನ್ನು ಭಯಭೀತಗೊಳಿಸಲು ಹೊರಟಿದೆ. 30 ವರ್ಷಗಳ ಬಳಿಕ ಹುಬ್ಬಳ್ಳಿಯಲ್ಲಿ ಇಬ್ಬರು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ದ್ವೇಷದ ರಾಜಕಾರಣಕ್ಕೆ ಸರ್ಕಾರ ಪ್ರತಿಫಲ ಅನುಭವಿಸುತ್ತದೆ. 30 ವರ್ಷಗಳ ಹಿಂದೆ ಆದ ಕೇಸ್​ಗಳಿಗೆ ಮರುಜೀವ ನೀಡಿ ಭಯ ಹುಟ್ಟಿಸುವ ಕಾರ್ಯ ಮಾಡುತ್ತಿದೆ'' ಎಂದು ಆರೋಪಿದರು.

Last Updated : Jan 2, 2024, 1:10 PM IST

ABOUT THE AUTHOR

...view details