ಹುಬ್ಬಳ್ಳಿ: ಲಾಕ್ಡೌನ್ ಘೋಷಣೆ ಆಗಿದ್ದೇ ಆಗಿದ್ದು, ಹುಬ್ಬಳ್ಳಿಯ ಪೊಲೀಸ್ ಠಾಣೆಗಳು ದ್ವಿಚಕ್ರ ವಾಹನಗಳಿಂದ ಭರ್ತಿಯಾಗಿವೆ.
ಹೌದು, ಲಾಕ್ಡೌನ್ನ ಎರಡನೇ ದಿನವಾದ ಹಿನ್ನೆಲೆ ವಾಹನ ಸವಾರರಿಗೆ ಪೊಲೀಸರು ಶಾಕ್ ಕೊಡುತ್ತಿದ್ದಾರೆ. ಅನವಶ್ಯಕವಾಗಿ ಬೈಕ್ನಲ್ಲಿ ತಿರುಗಾಡುವವರ ಬೈಕ್ಗಳನ್ನು ಸೀಜ್ ಮಾಡುತ್ತಿದ್ದಾರೆ. ಸೀಜ್ ಮಾಡಿದ ವಾಹನಗಳಲ್ಲಿ ಬೈಕ್ಗಳೇ ಹೆಚ್ಚು ಇವೆ.
ಸೀಜ್ ಮಾಡಿದ ಬೈಕ್ಗಳಿಂದಲೇ ಭರ್ತಿಯಾಗಿವೆ ಹುಬ್ಬಳ್ಳಿ ಪೊಲೀಸ್ ಠಾಣೆಗಳ ಆವರಣ! ನಗರದ ಬಹುತೇಕ ಪೊಲೀಸ್ ಠಾಣೆಯ ಆವರಣಗಳು ಸೀಜ್ ಮಾಡಿದ ಬೈಕ್ಗಳಿಂದಲೇ ತುಂಬಿದ್ದು, ವಾಹನಗಳನ್ನು ನಿಲ್ಲಿಸಲು ಸಹ ಸ್ಥಳವಿಲ್ಲದ ಸ್ಥಿತಿ ಸದ್ಯ ನಿರ್ಮಾಣವಾಗಿದೆ. ನಿನ್ನೆ ಅಷ್ಟೇ ಹು-ಧಾ ನಗರಗಳಲ್ಲೇ 503 ಬೈಕ್ಗಳನ್ನು ಸೀಜ್ ಮಾಡಿರುವ ಪೊಲೀಸರು, ಇಂದು ಮತ್ತೆ ಬೆಳಗ್ಗೆಯಿಂದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ:ದ.ಕ.ಜಿಲ್ಲೆಯಲ್ಲಿ ನರ್ಸ್ಗಳ ಕೊರತೆಯಾಗದಂತೆ ಸೂಕ್ತ ಕ್ರಮ: ಜಿಲ್ಲಾ ಆರೋಗ್ಯಾಧಿಕಾರಿ
ಮೇ 24ರವರೆಗೆ ಲಾಕ್ಡೌನ್ ಜಾರಿಯಲ್ಲಿರಲಿದೆ. ಅಲ್ಲಿಯವೆಗೂ ಬೈಕ್ಗಳನ್ನು ಸೀಜ್ ಮಾಡಿದ್ರೆ ಠಾಣೆ ಅಕ್ಕಪಕ್ಕದ ಜಾಗವೂ ಕೂಡ ಸೀಜ್ ಮಾಡಿದ ವಾಹಗಳಿಂದ ತುಂಬಿ ಹೋಗುವ ಆತಂಕ ಎದುರಾಗಿದೆ.