ಕರ್ನಾಟಕ

karnataka

ETV Bharat / state

ಕೊರೊನಾ ಕಾಟದ ನಡುವೆ ಸಾಂಕ್ರಾಮಿಕ ರೋಗಗಳ ತಡೆಗೆ ಮುಂದಾದ ಪಾಲಿಕೆ - new measures for controlling corona

ಕೊರೊನಾ ಮಹಾಮಾರಿಯನ್ನು ಕಟ್ಟಿಹಾಕಲು ಸ್ವಚ್ಛತೆ ಹಾಗೂ ನೈರ್ಮಲ್ಯ ಅತೀ ಮುಖ್ಯವಾಗಿದ್ದು, ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ, ಕಸ ವಿಲೇವಾರಿ ಹಾಗೂ ತ್ಯಾಜ್ಯ ಸಂಗ್ರಹಕ್ಕೆ ಹೊಸ ಯೋಜನೆ ರೂಪಿಸಿದೆ. ‌ಇದಕ್ಕಾಗಿ ಮಹಾನಗರ ಪಾಲಿಕೆ ಹಗಲಿರುಳು ಶ್ರಮ ಹಾಕುತ್ತಿದ್ದು, ನಗರದಲ್ಲಿ ಸಾಂಕ್ರಾಮಿಕ ರೋಗ ತಡೆಯುವತ್ತ ಹೆಜ್ಜೆ ಹಾಕಿದೆ.

ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ
ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ

By

Published : Aug 28, 2020, 10:36 PM IST

ಹುಬ್ಬಳ್ಳಿ: ‌ಹುಬ್ಬಳ್ಳಿ- ಧಾರವಾಡದ ‌ಮಹಾನಗರ ‌‌‌ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹರಡುತ್ತಿದೆ. ಅದರ ಜೊತೆಗೆ ಇತರೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ದಾಪುಗಾಲಿಟ್ಟಿದೆ. ಇದಕ್ಕಾಗಿ ಹೊಸ ಹೊಸ ಯೋಜನೆಗಳನ್ನು ರೂಪುಗೊಳಿಸಿದೆ.

ಸಾಂಕ್ರಾಮಿಕ ರೋಗಗಳ ತಡೆಗೆ ಮುಂದಾದ ಮಹಾನಗರ ಪಾಲಿಕೆ

ನೈರ್ಮಲ್ಯ ಹಾಗೂ ಕುಡಿಯುವ ನೀರಿನ ಪರಿಶುದ್ಧತೆ ಬಗ್ಗೆ ಪಾಲಿಕೆ ಎಚ್ಚರಿಕೆಯ ಕ್ರಮ ವಹಿಸಿದ್ದು, ವಸತಿ, ಅಂಗಡಿ ಸಮುಚ್ಚಯಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಅವಕಾಶವಾಗದಂತೆ ಎಚ್ಚರಿಕೆವಹಿಸಿದೆ. ಮೀನು, ಮಾಂಸ ಮಾರಾಟದ ಅಂಗಡಿಗಳ ಮಾಲೀಕರಿಗೆ ತೆರೆದಿಟ್ಟು ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಲಾಗುತ್ತಿದೆ.‌ ಅದರ ಜೊತೆಗೆ ಫಾಗಿಂಗ್ ಮತ್ತು ಡಿಗ್ಗಿಂಗ್ ಹೆಚ್ಚು ಮಾಡಲಾಗುತ್ತಿದೆ.

ಮಹಾನಗರ ಪಾಲಿಕೆ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು,‌ ಅದಕ್ಕಾಗಿ‌ ಎಲ್ಲೆಂದರಲ್ಲಿ ‌ಕಸ ಎಸೆದು‌ ಹೋಗುವವರಿಗೆ ಕಣ್ಣಿಡಲು ಸಿಸಿಟಿವಿಗಳನ್ನು ಹಾಕಲು ಮುಂದಾಗಿದೆ.‌ ಕಸ ವಿಲೇವಾರಿಗಾಗಿ ಹೆಚ್ಚೆಚ್ಚು ವಾಹನಗಳನ್ನು ‌ನಿಯೋಜನೆ ಮಾಡಲಾಗಿದೆ. ‌ಹಸಿ ಕಸ ಹಾಗೂ‌ ಒಣ ಕಸವನ್ನು ಪಾಲಿಕೆ ವಾಹನಗಳು ‌ಪ್ರತಿ ಮನೆಗೆ ತೆರಳಿ ಸಂಗ್ರಹ ಮಾಡುತ್ತಿದೆ. ಈ ಮೂಲಕ‌ ನಗರದ ನೈರ್ಮಲೀಕರಣ ಹಾಗೂ ಸೌಂದರ್ಯಕ್ಕೆ ಹೆಚ್ಚಿನ‌ ಒತ್ತು‌ ನೀಡಲಾಗುತ್ತಿದೆ.

ABOUT THE AUTHOR

...view details