ಹುಬ್ಬಳ್ಳಿ: ಸಿಮ್ ಬ್ಲಾಕ್ ಓಪನ್ ಮಾಡಲು ಮೊಬೈಲ್‌ಗೆ ಟೀಮ್ ವೀವರ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ತಿಳಿಸಿದ ವಂಚಕ, ನಗರದ ಯಲ್ಲಾಪುರ ಓಣಿಯ ವಿಜಯಲಕ್ಷ್ಮಿ ಗಂಗಣ್ಣವರ ಎಂಬುವರ ಎಸ್‌ಬಿಐ ಖಾತೆಯಿಂದ ₹1.51 ಲಕ್ಷ ವರ್ಗಾಯಿಸಿಕೊಂಡಿದ್ದಾನೆ.
ಅವಳಿನಗರದಲ್ಲಿ ಸೈಬರ್ ಖದೀಮರ ಹಾವಳಿ: ಸಿಮ್ ಬ್ಲಾಕ್ ಓಪನ್ ಮಾಡುವ ನೆಪದಲ್ಲಿ ವಂಚನೆ - Hubli cyber crime news
ಸಿಮ್ ಬ್ಲಾಕ್ ಓಪನ್ ಮಾಡುವ ನೆಪದಲ್ಲಿ ಆನ್ಲೈನ್ ವಂಚಕನೋರ್ವ ಹುಬ್ಬಳ್ಳಿಯ ಮಹಿಳೆಯೊಬ್ಬರ ಖಾತೆಯಿಂದ 1.51 ಲಕ್ಷ ರೂಪಾಯಿ ಎಗರಿಸಿದ್ದಾನೆ.
ಅವಳಿನಗರದಲ್ಲಿ ಸೈಬರ್ ಖದೀಮರ ಹಾವಳಿ
ವಿಜಯಲಕ್ಷ್ಮಿ ಅವರ ಮೊಬೈಲ್‌ಗೆ ಸಿಮ್ ಬ್ಲಾಕ್ ಆಗಿರುವ ಸಂದೇಶ ಬಂದಿದ್ದು, ಅದನ್ನು ಓಪನ್ ಮಾಡಲು ಅದರಲ್ಲಿರುವ ಮೊಬೈಲ್ ನಂಬರ್‌ಗೆ ಕರೆ ಮಾಡುವಂತೆ ತಿಳಿಸಲಾಗಿತ್ತು. ಆ ನಂಬರ್‌ಗೆ ಕರೆ ಮಾಡಿದಾಗ ಟೀಮ್ ವೀವರ್ ಡೌನ್‌ಲೋಡ್ ಮಾಡಿಕೊಂಡು ಅಳವಡಿಸಿಕೊಳ್ಳಬೇಕು ಎಂದು ವಂಚಕ ತಿಳಿಸಿದ್ದ. ಅದರಂತೆ ವಿಜಯಲಕ್ಷ್ಮಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆಗ ಆ ಆ್ಯಪ್‌ಗೆ ಅಕ್ಸೆಸ್ ನೀಡಿ, ಹಣ ವರ್ಗಾಯಿಸಿಕೊಂಡಿದ್ದಾನೆ. ಈ ಕುರಿತು ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.