ಕರ್ನಾಟಕ

karnataka

ETV Bharat / state

ಸಚಿವ ಜಗದೀಶ್ ಶೆಟ್ಟರ್​​​​​​ಗೆ ರಾಖಿ ಕಟ್ಟಿದ ಮಹಿಳಾ ಪೌರ ಕಾರ್ಮಿಕರು - ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನ್ಯೂಸ್

ಹುಬ್ಬಳ್ಳಿಯ ಗುತ್ತಿಗೆ ಪೌರ ಕಾರ್ಮಿಕ ಮಹಿಳೆಯರು ಸಚಿವ ಜಗದೀಶ್ ಶೆಟ್ಟರ್​ಗೆ ರಾಖಿ ಕಟ್ಟಿ ರಕ್ಷಾ ಬಂಧನದ ಶುಭಾಶಯ ತಿಳಿಸಿದರು.

Jagadish shettar
Jagadish shettar

By

Published : Aug 3, 2020, 12:45 PM IST

ಹುಬ್ಬಳ್ಳಿ: ರಕ್ಷಾ ಬಂಧನದ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿಯ ಗುತ್ತಿಗೆ ಪೌರ ಕಾರ್ಮಿಕ ಮಹಿಳೆಯರು ರಾಖಿ ಕಟ್ಟಿ ಶುಭಾಶಯ ತಿಳಿಸಿದರು.

ಈ ವೇಳೆ ಮಾತನಾಡಿದ ಶೆಟ್ಟರ್, ರಾಖಿ ಹಬ್ಬ ಸಹೋದರ- ಸಹೋದರರಿಗೆ ವಿಶೇಷವಾಗಿದ್ದು, ಜೀವನದಲ್ಲಿ ಸಂಕಷ್ಟ‌ ಎದುರಾದಾಗ ಸಹೋದರ ಪಾರು ಮಾಡುತ್ತಾನೆ ಎನ್ನುವುದನ್ನು ಸೂಚಿಸುತ್ತದೆ. ಈ ಹಬ್ಬ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಗುತ್ತಿಗೆ ಪೌರ ಕಾರ್ಮಿಕರಾದ ಗಂಗಮ್ಮ‌ ಸಿದ್ರಾಮಪುರ, ಸೀತಮ್ಮ ಮುದ್ದಿನಗೇರಿ, ಹುಲಿಗೆಮ್ಮ ಚಿಕ್ಕತುಂಬಳ, ಬಸಮ್ಮ ಮದರಿ ಹಾಗೂ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಡಾ.ವಿಜಯ ಗುಂಟ್ರಾಳ ಇದ್ದರು.

ABOUT THE AUTHOR

...view details