ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ನಗರ ಸಜ್ಜಾಗಿದೆ ಬಂಗಾಲಿ ಊಟಕ್ಕೆ.. ಬಂಗಾಳದಿಂದಲೇ ಬರ್ತಾರಂತೆ ಬಾಣಸಿಗರು.. - ಹುಬ್ಬಳ್ಳಿಯಲ್ಲಿ ಆಹಾರ ಮೇಳ

ಹುಬ್ಬಳ್ಳಿ ನಗರದಲ್ಲಿರುವ ಕ್ಲಾರ್ಕ್ಸ್ ಇನ್ ಹೋಟೆಲ್‌ನಲ್ಲಿ ಅಕ್ಟೋಬರ್‌ 4 ರಿಂದ 13ರವರೆಗೆ ಬೆಂಗಾಲಿ ಶೈಲಿಯ ಆಹಾರ ಮೇಳ ನಡೆಯಲಿದ್ದು, ಖಾದ್ಯ ತಯಾರಿಕೆಗೆ ಬಂಗಾಳದಿಂದಲೇ ಬಾಣಸಿಗರು ಆಗಮಿಸಿದ್ದಾರೆ.

ಬಂಗಾಲಿ ಶೈಲಿಯ ಆಹಾರ

By

Published : Oct 1, 2019, 6:10 PM IST

ಹುಬ್ಬಳ್ಳಿ: ಇಲ್ಲಿನ ಕ್ಲಾರ್ಕ್ಸ್ ಇನ್ ಹೋಟೆಲ್ ಈಗಾಗಲೇ ವಿವಿಧ ರುಚಿಯ ಖಾದ್ಯಗಳನ್ನು ಪರಿಚಯಿಸುತ್ತಾ ಬಂದಿದ್ದು, ಅದರಂತೆ ಅಕ್ಟೋಬರ್‌ 4ರಿಂದ 13ರವರೆಗೆ ಬಂಗಾಲಿ ಶೈಲಿಯ ಆಹಾರವನ್ನು ನಗರದ ಜನತೆಗೆ ಉಣಬಡಿಸಲು ಸಜ್ಜಾಗಿದೆ ಎಂದು ಹೋಟೆಲ್ ಮ್ಯಾನೇಜರ್ ಆರ್‌ ಕೆ ಮಹಾರಾಣಾ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಮೇಳವು ಅಕ್ಟೋಬರ್ 4 ರಿಂದ ಅ.13 ರವರೆಗೆ ಪ್ರತಿ ದಿನ ಸಂಜೆ 7.30 ರಿಂದ ರಾತ್ರಿ 11ರವರೆಗೆ ನಡೆಯಲಿದೆ. ಬಾಣಸಿಗ ಸಂಜಯ ಮೊಂಡಾಲ್ ಹಾಗೂ ಪಶ್ಚಿಮ ಬಂಗಾಳದಿಂದ ಆಗಮಿಸಿದ ಬಾಣಸಿಗರು ಬಂಗಾಲಿ ಶೈಲಿಯಲ್ಲಿ ಆಹಾರ ತಯಾರಿಸಲಿದ್ದಾರೆ ಎಂದರು.

ಆಹಾರಮೇಳದ ಬಗ್ಗೆ ವಿವಿರಣೆ ನೀಡಿದ ಹೋಟೆಲ್ ಮ್ಯಾನೇಜರ್..

ಆಹಾರದ ಮೇಳ ಬಫೆ ಪದ್ದತಿ ಆಗಿದ್ದು, ಒಂದು ಊಟಕ್ಕೆ 499 ರೂ. ಪ್ಲಸ್ ಶೇ.5 ರಷ್ಟು ತೆರಿಗೆ, 6 ರಿಂದ 12 ವರ್ಷದ ಮಕ್ಕಳಿಗೆ 249 ರೂ. ಪ್ಲಸ್ 5ರಷ್ಟು ತೆರಿಗೆಯೊಂದಿಗೆ ಸೂಪ್, ಸಲಾಡ್, ಚಾಟ್, ಸ್ಮಾರ್ಟರ್, ಮೇನ್ ಕೋರ್ಸ್, ಸಿಹಿ ತಿಂಡಿ ಸೇರಿದಂತೆ 44 ಕ್ಕಿಂತ ಹೆಚ್ಚಿನ ಬಂಗಾಲದ ಆಯ್ದ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತಿದ್ದು, ಮೂರು ಮೇನು ಸಿದ್ದಪಡಿಸಲಾಗಿದೆ. ಅದರಂತೆ ಪ್ರತಿದಿನ ಒಂದೊಂದು ಮೆನುವಿನ ಪ್ರಕಾರ ಆಹಾರ ಸಿದ್ದಪಡಿಸಲಾಗುವುದು. ಮೇಳದಲ್ಲಿ ಮೀನು, ಏಡಿ, ಸೀಗಡಿ, ಚಿಕ್ಕನ್, ಡಾರ್ಜಿಲಿಂಗ್‌ ವೆಜ್ ಸ್ಟ್ರಿಂಗ್ ರೋಲ್, ಚಿಕ್ಕನ್ ಡಾಲನಾ, ಮಿಡ್ನಾಪುರ ವೆಜ್ ಸೂಕ್ತೂ, ರಸಗುಲ್ಲಾ, ಕುಲ್ಪಿ, ಐಸ್ ಕ್ರೀಮ್ ಸೇರಿದಂತೆ ಹತ್ತು ಹಲವಾರು ಆಹಾರ ಸಿದ್ದಪಡಿಸಲಾಗುವುದು ಎಂದರು.

ABOUT THE AUTHOR

...view details