ಕರ್ನಾಟಕ

karnataka

ETV Bharat / state

ಇಂದಿನಿಂದ ಹುಬ್ಬಳ್ಳಿಯಲ್ಲಿ 10 ದಿನ ಲಾಕ್​ಡೌನ್, ನಗರ ಸಂಪೂರ್ಣ ಸ್ತಬ್ಧ - Hubli corona cases

ಲಾಕ್‌ಡೌನ್ ಹಿನ್ನೆಲೆ ನಗರದ ಎಲ್ಲಾ ರಸ್ತೆಗಳು ಖಾಲಿ ಖಾಲಿಯಾಗಿವೆ. ಸರ್ಕಾರಿ, ಖಾಸಗಿ ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಗೂಡ್ಸ್, ಟ್ರಾನ್ಸ್‌ಪೋರ್ಟ್‌ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ..

Hubli Lockdown The city is completely silence
ಹುಬ್ಬಳ್ಳಿ ಲಾಕ್​ಡೌನ್​: ನಗರ ಸಂಪೂರ್ಣ ಸ್ತಬ್ಧ

By

Published : Jul 15, 2020, 3:41 PM IST

ಹುಬ್ಬಳ್ಳಿ :ಇಂದಿನಿಂದ 10 ದಿನಗಳ ಕಾಲ ಹುಬ್ಬಳ್ಳಿ ಲಾಕ್​ಡೌನ್​ ಅನುಸರಿಸಲಿದ್ದು, ಎಲ್ಲೆಡೆ ಸಂಪೂರ್ಣ ಬೆಂಬಲ ವ್ಯಕ್ತವಾಗುತ್ತಿದೆ.

ಹುಬ್ಬಳ್ಳಿ ಲಾಕ್​ಡೌನ್ ​: ನಗರ ಸಂಪೂರ್ಣ ಸ್ತಬ್ಧ

ಲಾಕ್‌ಡೌನ್ ಹಿನ್ನೆಲೆ ಹುಬ್ಬಳ್ಳಿಯ ಎಲ್ಲಾ ರಸ್ತೆಗಳು ಖಾಲಿ ಖಾಲಿ ಹೊಡೆಯುತ್ತಿವೆ. ಸರ್ಕಾರಿ, ಖಾಸಗಿ ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿದ್ದು, ಗೂಡ್ಸ್, ಟ್ರಾನ್ಸ್‌ಪೋರ್ಟ್‌ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಇನ್ನೂ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಅವಳಿನಗರ ಫುಲ್ ಬಂದ್ ಆಗಲಿದೆ. ಆಟೋ ಸಂಚಾರ, ದ್ವಿಚಕ್ರ ವಾಹನಗಳ ಓಡಾಟಕ್ಕೆ 10 ಗಂಟೆಯವರೆಗೆ ಅನುಮತಿ ಇದ್ದು, ಒಂದು ಮನೆಯಿಂದ ಒಬ್ಬರಿಗೆ ಮಾತ್ರ ಹೊರಗೆ ಬರಲು ಅವಕಾಶವಿದೆ. ಹೆಚ್ಚು ಜನ ಸೇರದಂತೆ ಮಾರ್ಕೇಟ್‌ಗಳ ಮೇಲೆ ಪೊಲೀಸ್ ಕಣ್ಗಾವಲಿಟ್ಟಿದ್ದಾರೆ.

ABOUT THE AUTHOR

...view details