ಹುಬ್ಬಳ್ಳಿ:ಲಾಕ್‌ಡೌನ್ ಸಂದರ್ಭವನ್ನು ಬಂಡವಾಳ ಮಾಡಿಕೊಂಡ ಕೆಲ ವರ್ತಕರು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದರು. ಆದರೆ, ಅನ್ಲಾಕ್ ನಂತರ ಅಗತ್ಯ ವಸ್ತುಗಳ ಬೆಲೆ ಯಥಾಸ್ಥಿತಿಗೆ ಬಂದಿದ್ದು, ಗ್ರಾಹಕರು ನಿರಾಳರಾಗಿದ್ದಾರೆ.
ಅನ್ಲಾಕ್ ಬಳಿಕ ಸಹಜ ಸ್ಥಿತಿಗೆ ಮರಳಿದ ದಿನಸಿ ಪದಾರ್ಥಗಳ ಬೆಲೆ: ನಿಟ್ಟುಸಿರು ಬಿಟ್ಟ ಜನ - hubli city back to normal
ಲಾಕ್‌ಡೌನ್ ನೆಪ ಹೇಳಿ ಆಹಾರ ಹಾಗೂ ದಿನಸಿ ಪದಾರ್ಥಗಳನ್ನು ಬೇಕಾಬಿಟ್ಟಿ ದರಕ್ಕೆ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರು ಅನ್ಲಾಕ್ ಬಳಿಕ ಸಾಮಾನ್ಯ ದರದಲ್ಲೇ ಅಗತ್ಯ ವಸ್ತುಗಳನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ.
ದಿನಸಿ ಅಂಗಡಿ
ಲಾಕ್‌ಡೌನ್ ಹೇರಿದ್ದ ಪರಿಣಾಮ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಹೀಗಾಗಿ, ಸಣ್ಣಪುಟ್ಟ ಕಿರಾಣಿ ಅಂಗಡಿಗಳ ಮಾಲೀಕರು ಅಕ್ಕಿ, ಬೇಳೆ - ಕಾಳುಗಳು, ಅಡುಗೆ ಎಣ್ಣೆ, ತರಕಾರಿ ಸೇರಿ ಮತ್ತಿತರ ಸಾಮಗ್ರಿಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು.
ಅನ್ಲಾಕ್ ಜಾರಿಯಾಗುತ್ತಿದ್ದಂತೆ ಅಗತ್ಯ ವಸ್ತುಗಳ ದರ ಸಾಮಾನ್ಯ ಸ್ಥಿತಿಗೆ ಬಂದಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿದ್ದು, ಜನರು ಕೂಡ ಸುರಕ್ಷತಾ ಕ್ರಮ ಕೈಗೊಂಡು ಮನೆಯಿಂದ ಹೊರ ಬರುತ್ತಿದ್ದಾರೆ.