ಹುಬ್ಬಳ್ಳಿ:ನಾಳೆ ನಡೆಯಲಿರುವ ಪೌರತ್ವ ಜನಜಾಗೃತಿ ಸಮಾವೇಶದಲ್ಲಿ ರಾಜ್ಯದ ರಾಜಕೀಯದ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ನಾಳೆ ವಾಣಿಜ್ಯನಗರಿಯಲ್ಲೇ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ನಾಳಿನ ಹುಬ್ಬಳ್ಳಿ ಪೌರತ್ವ ಜನಜಾಗೃತಿ ಸಮಾವೇಶದಲ್ಲಿ ಸಚಿವ ಸಂಪುಟದ ವಿಸ್ತರಣೆ ಚರ್ಚೆ!? - ಸಮಾವೇಶಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಆಗಮನ
ಸಮಾವೇಶಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಅಮಿತ್ ಶಾ ಅವರೊಂದಿಗೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ವಿಶೇಷ ಅಂದ್ರೆ ನಾಳಿನ ಸಮಾವೇಶಕ್ಕೆ ಶಾಸಕ ಬಿ ಸಿ ಪಾಟೀಲ್ ಆಗಮಿಸುತ್ತಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಇದೆಲ್ಲಾ ಒಂದೆಡೆಯಾದರೆ, ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್, ರಮೇಶ ಜಾರಕಿಹೊಳಿ, ಮಹೇಶ ಕಮಟಳ್ಳಿ, ಶ್ರೀಮಂತಗೌಡ ಪಾಟೀಲ ಸೇರಿ ಮುಂತಾದವರು ಭಾಗಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಅಮಿತ್ ಶಾ ಭೇಟಿ ರಾಜ್ಯ ರಾಜಕರಣದಲ್ಲಿ ಒಂದಿಷ್ಟು ಬದಲಾವಣೆ ತರುವ ಸಾಧ್ಯತೆಯಿದೆ. ಸಂಪುಟ ವಿಸ್ತರಣೆಗೂ ಮೊದಲೇ ಯಾರಿಗೆ ಯಾವ ಖಾತೆ ಸಿಗುತ್ತೋ ಎಂಬುದರ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಿದೆ.