ಹುಬ್ಬಳ್ಳಿ: ವಾಣಿಜ್ಯ ನಗರಿಯ ಅರ್ನಾ ಎಸ್.ಪಾಟೀಲ್ ಎಂಬ ಪುಟ್ಟ ಬಾಲಕಿ ತನ್ನ ವಿಶೇಷ ಜ್ಞಾಪಕ ಶಕ್ತಿಯ ಮೂಲಕ ತನ್ನ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಿಸಿದ್ದಾಳೆ. ಈ ಪುಟಾಣಿ 10 ತರಕಾರಿ, 11 ಹಣ್ಣುಗಳು, 22 ಪ್ರಾಣಿಗಳ ಹೆಸರು, ಕನ್ನಡ ವರ್ಣಮಾಲೆ ಮತ್ತು A ಟು Z ವರೆಗೆ ಇಂಗ್ಲಿಷ್ ಅಕ್ಷರಗಳನ್ನು ಗುರುತಿಸಿ ಹೇಳಬಲ್ಲಳು.
ರಾಷ್ಟ್ರೀಯ ಚಿಹ್ನೆಗಳನ್ನು ಹೇಳುವುದು, 15 ದೇಹದ ಭಾಗಗಳನ್ನು ಗುರುತಿಸುವುದು, ಪ್ರಧಾನಮಂತ್ರಿಯ ಹೆಸರು ಮತ್ತು ಮುಖ್ಯಮಂತ್ರಿಯ ಹೆಸರುಗಳನ್ನು ಹೇಳುವ ಸಾಮರ್ಥ್ಯವನ್ನು ಹೊಂದಿದ್ದಾಳೆ.