ಹುಬ್ಬಳ್ಳಿ:ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನರು ಮತ್ತೆ ಕಂಗಾಲಾಗಿದ್ದಾರೆ. ಈ ಬಾರಿ ಮನೆ, ಮಠಗಳು ಅಷ್ಟೇ ಅಲ್ಲದೇ ಸಾರಿಗೆ ಸಂಸ್ಥೆಯ ಬಸ್ ಕೂಡಾ ಸೋರುತ್ತಿದೆ. ಹೀಗಾಗಿ ಸಾರಿಗೆ ಇಲಾಖೆಗೆ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಸೋರುತಿಹುದು ಬಸ್ನ ಮೇಲ್ಛಾವಣಿ... ಪ್ರಯಾಣಿಕರಿಗೆ ಇದೆಂಥ ದುಸ್ಥಿತಿ - Department of Transport
ಹುಬ್ಬಳ್ಳಿಯಿಂದ ಗುಡೇನಕಟ್ಟಿ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಮಳೆಯಲ್ಲಿ ನೆಂದುಕೊಂಡೇ ಊರು ತಲುಪಬೇಕಿದೆ. ಎಲ್ಲೆಂದರಲ್ಲಿ ರಂಧ್ರಗಳಾಗಿರುವ ಬಸ್ನ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ದಿನನಿತ್ಯ ಮಳೆಯಲ್ಲಿ ತೋಯಿಸಿಕೊಳ್ಳುವ ದುಸ್ಥಿತಿ ಇದೆ.
ಹುಬ್ಬಳ್ಳಿಯಿಂದ ಗುಡೇನಕಟ್ಟಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್ಗಳ ಪ್ರಯಾಣಿಕರು ಮಳೆಯಲ್ಲಿ ನೆಂದುಕೊಂಡೇ ಪ್ರಯಾಣಿಸಬೇಕಾಗಿದೆ. ಎಲ್ಲೆಂದರಲ್ಲಿ ರಂಧ್ರಗಳಾಗಿರುವ ಬಸ್ನ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ದಿನನಿತ್ಯ ನೀರಲ್ಲಿ ನೆನೆಯಬೇಕಾದ ದುಸ್ಥಿತಿ ಒದಗಿಬಂದಿದೆ.
ಇನ್ನು, ಪ್ರಯಾಣಿಕರು ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಕೂಡ ಅಧಿಕಾರಿಗಳು ಮಾತ್ರ ಸ್ಪಂದಿಸಿಲ್ಲವಂತೆ. ಮಳೆ ಬರುವ ಸಂದರ್ಭದಲ್ಲಿ ಸುಸಜ್ಜಿತವಾದ ಬಸ್ ನೀಡುವ ಬದಲು ಈ ರೀತಿಯ ಬಸ್ ನೀಡಿದ್ದು ಪ್ರಯಾಣಿಸುವುದೇ ದುಸ್ತರವಾಗಿದೆ. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ, ಸಮಸ್ಯೆಗೆ ಪರಿಹಾರ ನೀಡುವಂತೆ ಪ್ರಯಾಣಿಕರು ಮನವಿ ಮಾಡಿದ್ದಾರೆ.