ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ಮಧ್ಯದಲ್ಲಿ ತ್ವರಿತ ಸಾರಿಗೆ ಸೇವೆ ಕಲ್ಪಿಸುವ ಸದುದ್ದೇಶದಿಂದ ಜಾರಿಗೆ ತಂದಿರುವ ಬಿಆರ್ಟಿಎಸ್ ಸೇವೆಯಲ್ಲಿ ಸಾರ್ವಜನಿಕರು ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಮಸ್ಯೆಗೆ ಸೂಕ್ತ ಕ್ರಮಗಳನ್ನು ಜರುಗಿಸುವ ಹಾಗೂ ಕುಂದುಕೊರತೆಗಳನ್ನು ನಿವಾರಿಸಲು ಬಿಆರ್ಟಿಎಸ್ ನಿರ್ಧಾರ ಮಾಡಿದೆ.
ಈ ಹಿಂದೆ ಚಿಗರಿ ಬಸ್ ಸೇವೆಯಲ್ಲಿ ಕೆಲವೊಂದು ನ್ಯೂನತೆಗಳನ್ನು ಅನುಭವಿಸುವ ಮೂಲಕ ಜನರು ಪ್ರಯಾಣ ಮಾಡಬೇಕಾಗಿತ್ತು. ಆದರೆ ಈಗ ಯಾವುದೇ ಸಮಸ್ಯೆ ಇದ್ದರೂ ಟೋಲ್ ಫ್ರೀ ನಂಬರ್, ವಾಟ್ಸ್ ಆಪ್ ಮೂಲಕ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದಾಗಿದೆ. ಸ್ವಚ್ಚತೆ, ಸಿಬ್ಬಂದಿ ಅನುಚಿತ ವರ್ತನೆ, ಸಮಯದಲ್ಲಿ ವ್ಯತ್ಯಾಸ, ಸಂಚಾರ ನಿಯಮ ಉಲ್ಲಂಘನೆ ಹೀಗೆ ಎಲ್ಲ ರೀತಿಯ ಕುಂದುಕೊರತೆಗಳನ್ನು ಬಿಆರ್ಟಿಎಸ್ ಕಂಟ್ರೋಲ್ ರೂಮ್ ಗಮನಕ್ಕೆ ತರುವ ಕಾರ್ಯವನ್ನು ಮಾಡಬಹುದಾಗಿದೆ.