ಹುಬ್ಬಳ್ಳಿ :ಅತ್ಯಂತ ಕಡಿಮೆ ಅವಧಿಯಲ್ಲಿ ಸುವರ್ಣ ಚತುಷ್ಪಥ ಹೆದ್ದಾರಿಯಲ್ಲಿ ಕಾರಿನಲ್ಲಿ ಪ್ರಯಾಣಿಸುವ ಮೂಲಕ ನಾಲ್ವರು ಲಿಮ್ಕಾ ದಾಖಲೆ ಮಾಡಿದ್ದಾರೆ. ಹವ್ಯಾಸಕ್ಕಾಗಿ ನಡೆಯುತ್ತಿದ್ದ ಜಾಲಿ ರೈಡ್ ಈಗ ದಾಖಲೆಗೆ ಪ್ರೇರಣೆಯಾಗಿದೆ.
ಹುಬ್ಬಳ್ಳಿಯ ನಾಲ್ವರುಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆ.. ಹುಬ್ಬಳ್ಳಿ ಮೂಲದ ಸುಹಾಸ್ ಕುಲಕರ್ಣಿ, ಸುದೀಪ್, ಕುಶಾಲ್ ಬೋಲಮಲ್ ಹಾಗೂ ಶ್ರೀನಿವಾಸ್ ಜಾಧವ್ ಎಂಬ ನಾಲ್ವರು ಅತ್ಯಂತ ಕಡಿಮೆ ಅವಧಿಯಲ್ಲಿ ಸುವರ್ಣ ಚತುಷ್ಪಥ ರಸ್ತೆಯಲ್ಲಿ ಅತೀ ದೀರ್ಘವಾಗಿ ಕಾರಿನ ಮೂಲಕ ಪ್ರಯಾಣ ಮಾಡಿ ದಾಖಲೆ ಮಾಡಿದ್ದಾರೆ.
73 ಗಂಟೆ 53 ನಿಮಿಷಗಳ ಅವಧಿಯಲ್ಲಿ 5,962 ಕಿ.ಮೀ ಪರ್ಯಟನೆ ಮಾಡಿದ್ದಾರೆ. ಈ ಹಿಂದೆ ಇದ್ದ ದಾಖಲೆಯನ್ನು ಬ್ರೇಕ್ ಮಾಡಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ.
ಲಿಮ್ಕಾ ಬುಕ್ ಆಫ್ ರೆಕಾರ್ಡ್ ಪ್ರಮಾಣಪತ್ರ ಈ ನಾಲ್ವರಲ್ಲಿ ಮೂವರು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬರು ಹೈಕೋರ್ಟ್ ವಕೀಲರಾಗಿದ್ದಾರೆ. ಮೊದಲೆಲ್ಲ ಸೈಕಲ್, ಬೈಕ್ ಮೂಲಕ ರೈಡಿಂಗ್ ಮಾಡುತ್ತಿದ್ದವರು ಈಗ ಆಡಿ ಕಾರಿನಲ್ಲಿ ಸಾಹಸದ ಪ್ರಯಾಣ ಮಾಡಿ ದಾಖಲೆ ಬರೆದಿದ್ದಾರೆ. ಮುಂಬೈನಿಂದ ಪ್ರಾರಂಭಗೊಂಡ ಈ ಸಾಹಸದ ಪ್ರಯಾಣ ದೆಹಲಿ, ಚೆನ್ನೈ, ಕೋಲ್ಕತ್ತಾ ಮತ್ತು ಮುಂಬೈ ಮೆಟ್ರೊ ನಗರದ ಮೂಲಕ ಅಂತ್ಯಗೊಂಡಿತ್ತು.
ಇದನ್ನೂ ಓದಿ: ಅಧಿಕಾರಕ್ಕಾಗಿ ಹಾತೊರೆಯುವ ವ್ಯವಸ್ಥೆಗೆ ಬಂದು ನಿಂತಿದ್ದೇವೆ : ಹೆಚ್. ಡಿ ದೇವೇಗೌಡ