ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಆಶಾ ಕಾರ್ಯಕರ್ತೆಗೆ ಅವಾಚ್ಯ ಶಬ್ದಗಳಿಂದ ನಿಂದನೆ - Asha activist abused by unsayble words

ಕೋವಿಡ್-19 ಸೋಂಕಿತರ ದ್ವಿತೀಯ ಸಂಪರ್ಕ ಹೊಂದಿದ್ದವರ ಮಾಹಿತಿ ಪಡೆಯಲು ಹೋದ ಆಶಾ ಕಾರ್ಯಕರ್ತೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಆಶಾ ಕಾರ್ಯಕರ್ತೆ
ಆಶಾ ಕಾರ್ಯಕರ್ತೆ

By

Published : Jul 2, 2020, 8:53 PM IST

Updated : Jul 2, 2020, 9:10 PM IST

ಹುಬ್ಬಳ್ಳಿ: ಕೊರೊನಾ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಆಶಾ ಕಾರ್ಯಕರ್ತೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಆಶಾ ಕಾರ್ಯಕರ್ತೆಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಕೋವಿಡ್-19 ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ಅವರ ದ್ವಿತೀಯ ಸಂಪರ್ಕಿತರ ಮಾಹಿತಿ ಪಡೆಯಲು ಆಶಾ ಕಾರ್ಯಕರ್ತೆ ಹೋಗಿದ್ದರು. ವಾರ್ಡ್ ನಂ. 47ರಲ್ಲಿ ಸಮೀಕ್ಷೆ ನಡೆಸುತ್ತಿದ್ದಾಗ ಸ್ಥಳೀಯರು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ, ನಿಮ್ಮ ಕೆಲಸ ಏನಿಲ್ಲಿ?. ರೋಗ ನಮಗೆ ಬಂದಿಲ್ಲ ಎಂದು ಹೇಳುವ ಮೂಲಕ ನಮ್ಮ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆಂದು ಸರ್ವಮಂಗಳ ಕೋಡಿಹಾಳ ಆರೋಪಿಸಿದ್ದಾರೆ.

ಇನ್ನೂ ಜೀವದ ಹಂಗು ತೊರೆದು ಸರ್ವೆ ಮಾಡುತ್ತಿದ್ದರೂ, ಕೆಲವು ಪುಡಾರಿಗಳು ಕಿರುಕುಳ ನೀಡುತ್ತಿದ್ದಾರೆ. ಸರ್ಕಾರ ನೀಡುವ ನಾಲ್ಕು ಸಾವಿರ ಸಂಬಳ ನಮ್ಮ‌ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ. ಆದರೂ ಕೂಡ ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕೆಂದು ಕರ್ತವ್ಯ ಮಾಡುತ್ತಿದ್ದರೂ, ಜನರು ಸ್ಪಂದಿಸದೇ ನಿಂದಿಸುತ್ತಿರುವುದು ಬೇಸರದ ಸಂಗತಿ. ಕೂಡಲೇ ಸರ್ಕಾರ ನಮಗೆ ರಕ್ಷಣೆ ಜೊತೆಗೆ ಸಂಬಳವನ್ನು ಹೆಚ್ಚಿಸಬೇಕೆಂದು ಅಳಲು ತೊಡಿಕೊಂಡರು.

Last Updated : Jul 2, 2020, 9:10 PM IST

ABOUT THE AUTHOR

...view details