ಹುಬ್ಬಳ್ಳಿ: ವಿವಾದಾತ್ಮಕ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ಬಂಧಿತನಾಗಿರುವ ಯುವಕ ಪೊಲೀಸ್ ಬಂದೋಬಸ್ತ್ನಲ್ಲಿ ಪಿಯುಸಿ ಮೊದಲ ಪರೀಕ್ಷೆ ಪೂರ್ಣಗೊಳಿಸಿ, ಕಾರಾಗೃಹಕ್ಕೆ ತೆರಳಿದ್ದಾನೆ. ಪಿಯುಸಿ ಬ್ಯುಸಿನೆಸ್ ಸ್ಟಡಿ ಪರೀಕ್ಷೆ ಬರೆದ ಈತನನ್ನು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿಯೇ ಮತ್ತೆ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಯಿತು. ನ್ಯಾಯಾಲಯದ ನಿರ್ದೇಶನದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಬಿಗಿ ಬಂದೋಬಸ್ತ್ ನಿಯೋಜಿಸಿತ್ತು.
ಪೊಲೀಸ್ ಬಂದೋಬಸ್ತ್ನಲ್ಲಿ ಪರೀಕ್ಷೆ ಬರೆದು ಕಾರಾಗೃಹಕ್ಕೆ ತೆರಳಿದ ಆರೋಪಿ - ಪೊಲೀಸ್ ಬಂದೋಬಸ್ತ್ನಲ್ಲಿಯೇ ಪರೀಕ್ಷೆ ಮುಗಿಸಿ ಕಾರಾಗೃಹಕ್ಕೆ ತೆರಳಿದ ಅಭಿಷೇಕ ಹಿರೇಮಠ
ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತ ಆರೋಪಿ ಪಿಯುಸಿ ಬ್ಯುಸಿನೆಸ್ ಸ್ಟಡೀಸ್ ಪರೀಕ್ಷೆ ಬರೆದು ವಾಪಸ್ ಕಾರಾಗೃಹಕ್ಕೆ ತೆರಳಿದ್ದಾನೆ.
ಪರೀಕ್ಷೆ ಮುಗಿಸಿ ಕಾರಾಗೃಹಕ್ಕೆ ತೆರಳಿದ ಅಭಿಷೇಕ ಹಿರೇಮಠ