ಕರ್ನಾಟಕ

karnataka

ETV Bharat / state

ಟ್ರಾಫಿಕ್​ ಪೊಲೀಸ್​ ನಡೆ ಖಂಡಿಸಿ ಬೈಕ್ ಸವಾರನ ಆಕ್ರೋಶ - ಹುಬ್ಬಳ್ಳಿ ಸಂಚಾರಿ ಪೊಲೀಸ್

ಹುಬ್ಬಳ್ಳಿಯ ಕೊಪ್ಪಿಕ ರಸ್ತೆಯಲ್ಲಿ ಪೊಲೀಸರ ಟೋಯಿಂಗ್​ ವೆಹಿಕಲ್​ ಎದುರು ಬೈಕ್​ ಸವಾರನೊಬ್ಬ ಪ್ರತಿಭಟನೆ ನಡೆಸಿದನು. ವಿನಾಕಾರಣ ಬೈಕ್​ನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದನು.

hubballi traffic police seized bike
ಟ್ರಾಫಿಕ್​ ಪೊಲೀಸ್​ ನಡೆ ಖಂಡಿಸಿ ಬೈಕ್ ಸವಾರನ ಪ್ರತಿಭಟನೆ

By

Published : Sep 2, 2020, 9:13 PM IST

ಹುಬ್ಬಳ್ಳಿ: ದ್ವಿಚಕ್ರ ವಾಹನವೊಂದನ್ನು ಟೋಯಿಂಗ್ ವೆಹಿಕಲ್​ನಲ್ಲಿ ಕೊಂಡೊಯ್ಯುತ್ತಿರುವುದನ್ನು ವಿರೋಧಿಸಿ ಬೈಕ್ ಸವಾರನೊಬ್ಬ ಸಂಚಾರಿ ಪೊಲೀಸ್ ಟೋಯಿಂಗ್ ವಾಹನದ ಮುಂದೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಕೊಪ್ಪಿಕರ ರಸ್ತೆಯಲ್ಲಿ ನಡೆದಿದೆ.

ಟ್ರಾಫಿಕ್​ ಪೊಲೀಸ್​ ನಡೆ ಖಂಡಿಸಿ ಬೈಕ್ ಸವಾರನ ಪ್ರತಿಭಟನೆ

ನನ್ನ ಬೈಕ್​ ಯಾವುದೇ ನೋ ಪಾರ್ಕಿಂಗ್​ನಲ್ಲಿ ಇಲ್ಲ. ಆದರೂ ಕೂಡ ಟ್ರಾಫಿಕ್ ಪೊಲೀಸರು ವಾಹನವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ವಾಹನ ಸವಾರ ಪೊಲೀಸರ ನಡೆಯನ್ನು ಖಂಡಿಸಿ, ರಸ್ತೆ ಮಧ್ಯದಲ್ಲಿ ಆಕ್ರೋಶ ವ್ಯಕ್ತಪಡಿಸಿದನು.

ಇದರಿಂದ ಕೆಲ ಕಾಲ ಟ್ರಾಫಿಕ್ ತೊಂದರೆ ಉಂಟಾಗಿದ್ದು, ಪೊಲೀಸರು ಮತ್ತು ಬೈಕ್ ಸವಾರನ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು.

ABOUT THE AUTHOR

...view details