ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರಥಾನಿ ಪ್ರತಿಕ್ರಿಯೆ ಹುಬ್ಬಳ್ಳಿ: 'ಉತ್ತರ ಕರ್ನಾಟಕದ ಸಂಜೀವಿನಿ' ಎಂದೇ ಹೆಸರಾದ ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ನೂತನ ತುರ್ತು ಚಿಕಿತ್ಸಾ ಘಟಕದ ಏಳು ಮಹಡಿಯ ಸುಸಜ್ಜಿತ ಕಟ್ಟಡ ಲೋಕಾರ್ಪಣೆಗೆ ಸಿದ್ಧವಾಗಿ ನಿಂತಿದೆ. ಸುತ್ತಮುತ್ತಲಿನ ಹತ್ತಾರು ಜಿಲ್ಲೆಗಳಿಂದ ರೋಗಿಗಳು ಇಲ್ಲಿ ಚಿಕಿತ್ಸೆಗೆ ಆಗಮಿಸುತ್ತಾರೆ. ರೋಗಿಗಳು ಬೇರೆ ಬೇರೆ ಕಟ್ಟಡಗಳಲ್ಲಿರುವ ವಿಭಾಗಕ್ಕೆ ಓಡಾಡಬೇಕಿತ್ತು. ಆದ್ರೀಗ ತುರ್ತು ಚಿಕಿತ್ಸೆಗಾಗಿ ಏಳು ಮಹಡಿಯ ತುರ್ತು ಚಿಕಿತ್ಸಾ ಘಟಕದ ಕಾಮಗಾರಿ ಪೂರ್ಣಗೊಂಡಿದೆ.
ಇದನ್ನೂ ಓದಿ:Congress Guarantee Scheme: ಅನ್ನಭಾಗ್ಯ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ
ಕಟ್ಟಡದ ಕೆಳಮಹಡಿಯಲ್ಲಿ ತುರ್ತು ಚಿಕಿತ್ಸೆಯ 40 ಬೆಡ್ ಹಾಗೂ ರೆಕಾರ್ಡ್ ಸೆಕ್ಷನ್ ಇರಲಿದೆ. ಮೊದಲನೇ ಮಹಡಿಯಲ್ಲಿ 40 ಮೆಡಿಕಲ್ ಐಸಿಯು ಬೆಡ್ ಹಾಗೂ ವೆಂಟಿಲೇಟರ್ಸ್, ಎರಡನೇ ಮಹಡಿಯಲ್ಲಿ 40 ಬೆಡ್‍ವುಳ್ಳ ಸರ್ಜಿಕಲ್ ಐಸಿಯು, ಮೂರನೇ ಮಹಡಿಯಲ್ಲಿ 40 ಡಯಾಲಿಸಿಸ್ ಬೆಡ್‍ಗಳು ಹಾಗೂ ಸಂಬಂಧಿಸಿದ ವೈದ್ಯಕೀಯ ಸಲಕರಣೆಗಳು, ನಾಲ್ಕನೇ ಮಹಡಿಯಲ್ಲಿ 6 ಮಾಡ್ಯೂಲರ್ ಆಪರೇಷನ್ ಥೇಟರ್, ಐದನೇ ಮಹಡಿಯಲ್ಲಿ 2 ಕಾನ್ಫರೆನ್ಸ್ ಹಾಲ್‍ಗಳಿದ್ದು, ಇನ್ನುಳಿದ ಮಹಡಿಯಲ್ಲಿ ಇತರ ವೈದ್ಯಕೀಯ ಉಪಯೋಗಕ್ಕಾಗಿ ಮೀಸಲಿಡಲಾಗಿದೆ.
ಇದನ್ನೂ ಓದಿ:'ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರೆಸಿತು' ಎಂಬಂತೆ ಕಾಂಗ್ರೆಸ್ ಹುಚ್ಚಾಟ ಆಡುತ್ತಿದೆ: ಬಿಜೆಪಿ ಜತೆ ಚುನಾವಣೆ ಒಳಒಪ್ಪಂದ ಎಂದಿದ್ದಕ್ಕೆ ಜೆಡಿಎಸ್ ಗರಂ
ಮೊದಲು ಕಿಮ್ಸ್ ಹಳೇ ಕಟ್ಟಡದಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಹೊಸ ಕಟ್ಟಡದಲ್ಲಿ ಸೌಕರ್ಯಗಳು ಹೆಚ್ಚಾಗಲಿದೆ. ಉದ್ಘಾಟನೆಯಾಗದಿದ್ದರೂ ಕೂಡ ತಾತ್ಕಾಲಿಕವಾಗಿ ಹಂತ ಹಂತವಾಗಿ ನೂತನ ಮಹಡಿಯಲ್ಲಿ ಐಸಿಯು, ಡಯಾಲಿಸಿಸ್ ಸೇರಿದಂತೆ ವಿವಿಧ ತುರ್ತು ಚಿಕಿತ್ಸೆಗಳನ್ನು ಇಲ್ಲಿ ಕೊಡಲಾಗುತ್ತಿದೆ. ಹೊಸ ಕಟ್ಟಡಕ್ಕೆ ಇನ್ನೂ ಅಧಿಕೃತವಾಗಿ ಉದ್ಘಾಟನೆಯ ಭಾಗ್ಯ ಒದಗಿ ಬಂದಿಲ್ಲ.
ಕಿಮ್ಸ್ ನಿರ್ದೇಶಕರ ಮಾಹಿತಿ:ಕಿಮ್ಸ್ ಆಸ್ಪತ್ರೆಯಲ್ಲೀಗ ತುರ್ತು ಚಿಕಿತ್ಸಾ ಘಟಕದ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡು ಈಗಾಗಲೇ ಹಂತ ಹಂತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವಂತಹ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ತುರ್ತು ಚಿಕಿತ್ಸಾ ಘಟಕದ ನೂತನ ಕಟ್ಟಡವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಬೇಕಿದೆ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರಥಾನಿ ಹೇಳಿದರು.
ಇದನ್ನೂ ಓದಿ:Congress Guarantee scheme : ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಿದ ಸರ್ಕಾರ
ಪ್ರಧಾನಿಯಿಂದ ಉದ್ಘಾಟನೆಯಾಬೇಕಿತ್ತು:ಚುನಾವಣಾ ಪೂರ್ವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಕಟ್ಟಡ ಉದ್ಘಾಟನೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಆಗಲಿಲ್ಲ. ಆದರೆ ಇದೀಗ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಂಟಿಯಾಗಿ ಉದ್ಘಾಟನೆ ಮಾಡುತ್ತವೆಯೇ? ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:Congress Guarantee Scheme: ಅನ್ನಭಾಗ್ಯ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ