ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ತೇವಾಂಶ ಹಿನ್ನೆಲೆ ಭಾರತ - ನ್ಯೂಜಿಲ್ಯಾಂಡ್​​  ಎ ತಂಡಗಳ ಟೆಸ್ಟ್ ನಾಳೆಗೆ ಮುಂದೂಡಿಕೆ

ಹುಬ್ಬಳ್ಳಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿಂದು ಮಧ್ಯಾಹ್ನದವರೆಗೂ ಕೂಡ ತೇವಾಂಶ ಹಿಡಿತಕ್ಕೆ ಬಾರದೇ ಇರುವ ಹಿನ್ನೆಲೆಯಲ್ಲಿ ಭಾರತ - ಎ ಹಾಗೂ ನ್ಯೂಜಿಲೆಂಡ್‌ - ಎ ತಂಡಗಳ ಟೆಸ್ಟ್​ ಪಂದ್ಯ ನಾಳೆಗೆ ಮುಂದೂಡಲ್ಪಟ್ಟಿದೆ.

hubballi-india-and-new-zealand-a-team-test-match-postponed-to-tomorrow
ಹುಬ್ಬಳ್ಳಿ: ತೇವಾಂಶ ಹಿನ್ನೆಲೆ ಭಾರತ - ನ್ಯೂಜಿಲೆಂಡ್‌ ಎ ತಂಡಗಳ ಟೆಸ್ಟ್ ನಾಳೆಗೆ ಮುಂದೂಡಿಕೆ

By

Published : Sep 8, 2022, 7:22 PM IST

Updated : Sep 8, 2022, 11:06 PM IST

ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿಂದು ನಡೆಯಬೇಕಿದ್ದ ಭಾರತ ಹಾಗೂ ನ್ಯೂಜಿಲ್ಯಾಂಡ್​​ - ಎ ತಂಡಗಳ ನಡುವಣ ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್ ಪಂದ್ಯವು ನಾಳೆ (ಶುಕ್ರವಾರ)ಗೆ ಮುಂದೂಡಿಕೆಯಾಗಿದೆ.

ಮೈದಾನದಲ್ಲಿ ತೇವಾಂಶ ಹೆಚ್ಚಿದ್ದ ಕಾರಣ ಬೆಳಗ್ಗೆ 9-30ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಸುಮಾರು ಕಾಲ ವಿಳಂಬವಾಗಿತ್ತು. ಈ ನಡುವೆ ಮಧ್ಯಾಹ್ನದವರೆಗೂ ಕೂಡ ತೇವಾಂಶ ಹಿಡಿತಕ್ಕೆ ಬಾರದೇ ಇರುವ ಹಿನ್ನೆಲೆಯಲ್ಲಿ ಪಂದ್ಯ ನಾಳೆಗೆ ಮುಂದೂಡಲ್ಪಟ್ಟಿದೆ.

ಬುಧವಾರ ರಾತ್ರಿ ಹಾಗೂ ಗುರುವಾರ ನಸುಕಿನಲ್ಲಿ ಸ್ವಲ್ಪ ಮಳೆಯಾಗಿದ್ದು, ಕ್ರೀಡಾಂಗಣ ತೇವಗೊಂಡಿದೆ. ಕ್ರೀಡಾಂಗಣದ ಹಲವು ಸಿಬ್ಬಂದಿ ತೇವಾಂಶ ಹೊರಹಾಕಲು ಶ್ರಮಿಸುತ್ತಿದ್ದಾರೆ. ಮೂರು ವರ್ಷಗಳ ಬಳಿಕ ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಸಲು ಬಿಸಿಸಿಐ ಅವಕಾಶ ನೀಡಿದೆ. ಹೀಗಾಗಿ ಈ ಟೆಸ್ಟ್​ ಪಂದ್ಯವನ್ನು ಕಣ್ತುಂಬಿಕೊಳ್ಳಲು ನೂರಾರು ಜನರು ನೆರೆದಿದ್ದರು.

ತೇವಾಂಶ ಹಿನ್ನೆಲೆ ಭಾರತ - ನ್ಯೂಜಿಲ್ಯಾಂಡ್​​ ಎ ತಂಡಗಳ ಟೆಸ್ಟ್ ನಾಳೆಗೆ ಮುಂದೂಡಿಕೆ

ಅಲ್ಲದೇ, ಕ್ರಿಕೆಟ್ ಪಂದ್ಯಾವಳಿಗೆ ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ನೋಂದಾಯಿತ ಅಕಾಡೆಮಿಯ ಕ್ರಿಕೆಟ್ ಕಲಿಕಾ ಆಟಗಾರರು ಒಳಗೊಂಡಂತೆ ಸುಮಾರು 2 ಸಾವಿರ ಜನರಿಗೆ ಉಚಿತ ಪ್ರವೇಶ ನೀಡಲಾಗಿದೆ.

ಇದನ್ನೂ ಓದಿ:ICC T20 World Cup.. ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಜೊತೆ ಸೆಣಸಾಡಲಿದೆ ಭಾರತ

Last Updated : Sep 8, 2022, 11:06 PM IST

ABOUT THE AUTHOR

...view details