ಹುಬ್ಬಳ್ಳಿ : ನಗರದ ಸುಪ್ರಸಿದ್ಧ ಸಿದ್ದಾರೂಢ ಮಠದಲ್ಲಿ ಉಭಯ ಶ್ರೀಗಳ ಕರ್ತೃ ಗದ್ದುಗೆ ದರ್ಶನ ಪಡೆದು ಸಿದ್ದಾರೂಢರ ರಥೋತ್ಸವ ನೋಡಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಈ ನಡುವೆ ಬಂದ ಭಕ್ತರ ಮಂಗಳ ಸೂತ್ರವನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ಸಿದ್ಧಾರೂಢ ಶ್ರೀಗಳ ಜಾತ್ರೆಯಲ್ಲಿ ಕಳ್ಳರ ಕೈ ಚಳಕ: ಮಾಂಗಲ್ಯ ಸರ ಕದ್ದು ಪರಾರಿ - hubballi gold chain theft case
ಸಿದ್ದಾರೂಢ ರಥೋತ್ಸವಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದು, ಈ ನಡುವೆ ಕಳ್ಳರು ಭಕ್ತರೋರ್ವರ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
![ಸಿದ್ಧಾರೂಢ ಶ್ರೀಗಳ ಜಾತ್ರೆಯಲ್ಲಿ ಕಳ್ಳರ ಕೈ ಚಳಕ: ಮಾಂಗಲ್ಯ ಸರ ಕದ್ದು ಪರಾರಿ hubballi gold chain theft case at siddharudha chariot](https://etvbharatimages.akamaized.net/etvbharat/prod-images/768-512-14657784-214-14657784-1646620551176.jpg)
ಕುಟುಂಬದವರ ಜತೆ ರಥೋತ್ಸವಕ್ಕೆ ಬಂದಿದ್ದ ನಾಗಶೆಟ್ಟಿಕೊಪ್ಪದ ವಿಜಯಲಕ್ಷ್ಮಿ ವಾಲಿ ಎಂಬುವರ ಕೊರಳಲ್ಲಿನ 1.80 ಲಕ್ಷ ರೂ ಮೌಲ್ಯದ 40 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಕಳ್ಳರು ಎಗರಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ರಥೋತ್ಸವ ನೋಡಲು ಬಂದಿದ್ದು, ಇದನ್ನೆ ಬಂಡವಾಳವಾಗಿಸಿಕೊಂಡ ಕಳ್ಳರು ಮಠದ ಒಳಗೆ, ಹೊರಗೆ ಮತ್ತು ಜನನಿಬಿಡ ಸ್ಥಳದಲ್ಲಿ ಕಳ್ಳರು ಕಳ್ಳತನದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಓದಿ :Russia - Ukraine War: ರಷ್ಯಾ- ಉಕ್ರೇನ್ ಯುದ್ಧದ ಭೀತಿ..ರಷ್ಯಾಕ್ಕೆ ಆರ್ಥಿಕ ಹೊಡೆತ!