ಹುಬ್ಬಳ್ಳಿ: ಸ್ಕೇಟಿಂಗ್‌ನ ಇನ್‌ಲೈನ್ ವಿಭಾಗದಲ್ಲಿ 23 ಸೆಕೆಂಡ್‌ಗಳಲ್ಲಿ 3 ಹೂಲಾಹೂಪ್ಸ್ ಸುತ್ತುತ್ತಲೇ ಹುಬ್ಬಳ್ಳಿಯ ಬಾಲಕಿ ಸ್ತುತಿ ಕುಲಕರ್ಣಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾಳೆ.
ಹುಬ್ಬಳ್ಳಿಯ ಶಿರೂರ ಪಾರ್ಕ್ ನಿವಾಸಿಯಾದ ರಶ್ಮಿ, ಕಿಶೋರ್ ಕುಲಕರ್ಣಿ ದಂಪತಿ ಮುದ್ದಿನ ಮಗಳು ಸ್ತುತಿ ಕುಲಕರ್ಣಿ ಗಿನ್ನೆಸ್ ವಿಶ್ವ ದಾಖಲೆ ಮಾಡಿ, ಕೇವಲ ಹುಬ್ಬಳ್ಳಿಗೆ ಮಾತ್ರವಲ್ಲದೇ ರಾಷ್ಟ್ರಕ್ಕೂ ಹೆಮ್ಮೆ ತರುವ ಕೆಲಸ ಮಾಡಿದ್ದಾಳೆ.
ಲಿಮ್ಕಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ ಸ್ತುತಿ ಕುಲಕರ್ಣಿ ಚಿಕ್ಕ ವಯಸ್ಸಿನಲ್ಲೇ ಹೂಪ್ಸ್ ಸುತ್ತುತ್ತಾ ಸ್ಕೇಟಿಂಗ್ ಮಾಡುವುದು ಅಂದ್ರೆ ಸ್ತುತಿಗೆ ಬಹಳ ಇಷ್ಟವಂತೆ. ಇದನ್ನು ಮನಗಂಡ ಪೋಷಕರು ಆಕೆಗೆ ಉತ್ತಮ ತರಬೇತಿ ಕೊಡಿಸಿದ್ದಾರೆ. 8ನೇ ವಯಸ್ಸಿನಲ್ಲೇ ಇನ್‍ಲೈನ್ ಸ್ಕೇಟಿಂಗ್ ಕಲಿತು, ಎರಡೂ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾಳೆ. ಸ್ಕೇಟಿಂಗ್‌ನ ಇನ್‌ಲೈನ್ ವಿಭಾಗದಲ್ಲಿ 23 ಸೆಕೆಂಡ್‌ಗಳಲ್ಲಿ 3 ಹೂಲಾಹೂಪ್ಸ್ ಸುತ್ತುತ್ತಲೇ ಈ ಹಿಂದಿನ 11 ದಾಖಲೆಗಳನ್ನು ಮುರಿದು ಸಾಧನೆ ಮಾಡಿದ್ದಾಳೆ.
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮಾಡಿದ ಸ್ತುತಿ ಕುಲಕರ್ಣಿ ಇದನ್ನೂ ಓದಿ:'ಅಲ್ಲಾಹು ಅಕ್ಬರ್..' ಘೋಷಣೆ ಕೂಗಿದ ವಿದ್ಯಾರ್ಥಿನಿಗೆ 5 ಲಕ್ಷ ನಗದು ಘೋಷಣೆಯ ಪೋಸ್ಟ್ ವೈರಲ್
ಬೈಜೂಸ್ನೊಂದಿಗೆ ತನ್ನ ಫ್ಯಾಶನ್ ಮತ್ತು ಶೈಕ್ಷಣಿಕ ಕಲಿಕೆ ಎರಡಕ್ಕೂ ಸಮನಾದ ಸಮಯ ನೀಡಿ, ಕಲಿಕೆಯನ್ನು ಇಷ್ಟಪಡುವಷ್ಟೇ ಸ್ಕೇಟಿಂಗ್, ಹೂಲಾ ಹೂಪ್ಸ್ ಸುತ್ತುವುದನ್ನು ಇಷ್ಟಪಡುತ್ತಾಳೆ. ಜೊತೆಗೆ ಸ್ತುತಿ ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಾಳೆ ಎಂಬ ವಿಶ್ವಾಸ ನಮಗಿದೆ ಎಂದು ಬಾಲಕಿಯ ಪೋಷಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲಿಮ್ಕಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ ಸ್ತುತಿ ಕುಲಕರ್ಣಿ