ಹುಬ್ಬಳ್ಳಿ: ಕೊರೊನಾ ಮಹಾಮಾರಿ ನಡುವೆಯೂ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆ ಬೀಜ ಬಿತ್ತನೆ ಮಾಡಿದ್ದಾರೆ. ಉತ್ತಮ ಫಸಲು ತೆಗೆಯಬೇಕು ಎಂದುಕೊಂಡ್ಡಿದ್ದ ರೈತರಿಗೀಗ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ನಷ್ಟ ಅನುಭವಿಸುವ ಆತಂಕ ಎದುರಾಗಿದೆ.
ಹೌದು, ಜಿಲ್ಲೆಯಲ್ಲಿ ಕೊರೊನಾ ಲಾಕ್ಡೌನ್ ಸೇರಿದಂತೆ ಇನ್ನಿತರ ಆರ್ಥಿಕ ಮುಗ್ಗಟ್ಟಿನ ನಡುವೆಯೂ ರೈತರು ಸಾಲಸೂಲ ಮಾಡಿ ಹೊಲಗಳನ್ನು ಹದಮಾಡಿ ಇಟ್ಟು, ಭೂಮಿ ತಾಯಿಗೆ ಬೀಜ ಬಿತ್ತಿದ್ದಾರೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಹತ್ತಿ, ಸೊಯಾಬಿನ್, ಹೆಸರು, ಅಲಸಂದಿ, ತೊಗರಿ, ಹತ್ತಿ, ಸಜ್ಜೆ ಹಾಗೂ ಸೂರ್ಯಕಾಂತಿ ಬಿತ್ತನೆ ಮಾಡಿದ್ದು, ಉತ್ತಮವಾಗಿ ಬೆಳೆ ಬರಲಾರಂಭಿಸಿತ್ತು.