ಹುಬ್ಬಳ್ಳಿ: ಕೆಲವು ದಿನಗಳ ಹಿಂದೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್ಗಳ ಪೈಕಿ, ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಇದೀಗ ಆಕ್ಷೇಪಣೆಗಳನ್ನು ಪರಿಗಣನೆಗೆ ತೆಗೆದುಕೊಂಡು ಹೊಸ ಮೀಸಲಾತಿ ಪ್ರಕಟಿಸಿದೆ.
ಈ ಬಗ್ಗೆ ರಾಜ್ಯಪತ್ರವನ್ನು ಹೊರಗೆ ಹಾಕಲಾಗಿದೆ. ಈ ಹಿಂದೆ ಸಲ್ಲಿಸಿದ ಸಲಹೆ ಮತ್ತು ಆಕ್ಷೇಪಣೆಗಳನ್ನು ಪಡೆದು, ಹೊಸದಾಗಿ ಮೀಸಲಾತಿಯನ್ನು ಪ್ರಕಟ ಮಾಡಲಾಗಿದ್ದು, ಬಹುತೇಕ ಮೊದಲ ಬಾರಿಗೆ ಹೊರಬಿದ್ದಂತಹ ಪಟ್ಟಿ ಇದಾಗಿದೆ.
ಹು-ಧಾ ಮಹಾನಗರ ಪಾಲಿಕೆ ವಾರ್ಡ್ ಹೊಸ ಮೀಸಲಾತಿ ಪಟ್ಟಿ ಪ್ರಕಟ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ವಾರ್ಡ್ಗಳನ್ನು ಘೋಷಣೆ ಮಾಡಿ ಮೀಸಲಾತಿ ಕೂಡಾ ಬಿಡುಗಡೆ ಮಾಡಲಾಗಿತ್ತು. ನಂತರ ಈ ಕುರಿತು ತಕರಾರು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಸದ್ಯ ಎಲ್ಲವೂ ಮುಗಿಸಿದ್ದು, ಹೀಗಾಗಿ ಲಿಸ್ಟ್ ಅನ್ನು ಫೈನಲ್ ಮಾಡಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಲ್ಲಿಕೆ ಮಾಡಿದರು.
ಈಗಾಗಲೇ ಹುಬ್ಬಳ್ಳಿ ಧಾರವಾಡದಲ್ಲಿ 82 ವಾರ್ಡ್ಗಳನ್ನು ಮಾಡಲಾಗಿದೆ. ಜೊತೆಯಲ್ಲಿ ಮೀಸಲಾತಿ ಕೂಡ ಬಿಡುಗಡೆ ಮಾಡಲಾಗಿದೆ. ಸದ್ಯ ಎಲ್ಲವೂ ಅಂತಿಮವಾದ ಹಿನ್ನೆಲೆ ವಾರ್ಡ್ಗಳ ಪಟ್ಟಿಯನ್ನು ಸಲ್ಲಿಕೆ ಮಾಡಲಾಗಿದೆ. ಸದ್ಯ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪೈನಲ್ ಮಾಡಿ ಸಲ್ಲಿಕೆ ಮಾಡಿದ್ದು, ಇನ್ನೇನಿದ್ದರೂ ಚುನಾವಣೆ ದಿನಾಂಕ ಅಷ್ಟೇ ಘೋಷಣೆ ಬಾಕಿ ಉಳಿದಿದ್ದು, ಇದಕ್ಕೆ ಯಾವಾಗ ಗ್ರೀನ್ ಸಿಗ್ನಲ್ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಓದಿ:ಖರೀದಿಸಿ ತಂದ ಕುದುರೆಗಳ ಮೇಲೆ ಸವಾರಿ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ: ಬಿಎಸ್ವೈ ಕುರಿತು ಹೆಚ್ಡಿಕೆ ವ್ಯಂಗ್ಯ