ಧಾರವಾಡ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಗಾಗಿ ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತವಾಗಿ ಮತದಾನ ಜರುಗಿತು. ಒಟ್ಟು 8,18,096 ಮತದಾರರ ಪೈಕಿ 4,40,251 ಮತದಾರರು ಮತ ಚಲಾಯಿಸಿದ್ದು, ಶೇ 53.81 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಅವರು ತಿಳಿಸಿದ್ದಾರೆ.
ಹು-ಧಾ ಮಹಾನಗರ ಪಾಲಿಕೆ ಚುನಾವಣೆ: ಶೇ. 53.81ರಷ್ಟು ವೋಟಿಂಗ್ - ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
ಮೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆದಿದ್ದು, ಬರುವ 6ನೇ ತಾರೀಖಿನಂದು ಫಲಿತಾಂಶ ಬಹಿರಂಗಗೊಳ್ಳಲಿದೆ.
![ಹು-ಧಾ ಮಹಾನಗರ ಪಾಲಿಕೆ ಚುನಾವಣೆ: ಶೇ. 53.81ರಷ್ಟು ವೋಟಿಂಗ್ Hubballi-Dharwad Municipal Corporation](https://etvbharatimages.akamaized.net/etvbharat/prod-images/768-512-12963602-thumbnail-3x2-wdfddfd.jpg)
Hubballi-Dharwad Municipal Corporation
82 ವಾರ್ಡ್ಗಳಲ್ಲಿ ಒಟ್ಟು 842 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅದರಲ್ಲಿ 292 ಸೂಕ್ಷ್ಮ, 93 ಅತೀಸೂಕ್ಷ್ಮ ಮತ್ತು 457 ಸಾಮಾನ್ಯ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಎಲ್ಲ ಮತಗಟ್ಟೆಗಳಲ್ಲಿಯೂ ಶಾಂತಿಯುತವಾಗಿ ಮತದಾನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಳಿದಂತೆ ಬೆಳಗಾವಿಯಲ್ಲಿನ 58 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಶೇ. 50.41ರಷ್ಟು ಹಾಗೂ ಕಲಬುರಗಿಯಲ್ಲಿನ 55 ವಾರ್ಡ್ಗಳಲ್ಲಿ ಶೇ. 47.77ರಷ್ಟು ವೋಟಿಂಗ್ ಆಗಿದೆ. ಕೊರೊನಾ ಸೋಂಕಿನ ಕಾರಣ ಎಲ್ಲ ಪಾಲಿಕೆಗಳಲ್ಲಿ ನಿರಸ ವೋಟಿಂಗ್ ಆಗಿದೆ.