ಕರ್ನಾಟಕ

karnataka

ETV Bharat / state

ಹು-ಧಾ ಮಹಾನಗರ ಪಾಲಿಕೆ ಫಲಿತಾಂಶ: ಗೆಲುವಿನ ಸನಿಹದಲ್ಲಿ ಎಡವಿದ ಬಿಜೆಪಿ, ಕಾಂಗ್ರೆಸ್​​​​ನಿಂದ ಭರ್ಜರಿ ಟಕ್ಕರ್​!

ಹುಬ್ಬಳ್ಳಿ- ಧಾರವಾಡ ಪಾಲಿಕೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. 82 ಸ್ಥಾನಗಲ್ಲಿ ಬಿಜೆಪಿ 39 ಹಾಗೂ ಕಾಂಗ್ರೆಸ್​ 33 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದೆ. ಕೇಸರಿ ಪಡೆ ಗೆಲುವಿನ ಸನಿಹದಲ್ಲಿ ಎಡವಿದ್ದು, ಅಧಿಕಾರ ಹಿಡಿಯಲು ಸಾಹಸ ಮಾಡಬೇಕಿದೆ.

Hubballi Dharwad city corporation election result
ಹು-ಧಾ ಮಹಾನಗರ ಪಾಲಿಕೆ ಫಲಿತಾಂಶ: ಗೆಲುವಿನ ಸನಿಹದಲ್ಲಿ ಎಡವಿದ ಬಿಜೆಪಿ, ಕಾಂಗ್ರೆಸ್​​​​ನಿಂದ ಭರ್ಜರಿ ಟಕ್ಕರ್​!

By

Published : Sep 6, 2021, 2:10 PM IST

Updated : Sep 6, 2021, 3:09 PM IST

ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾರ ಅತಂತ್ರ ಫಲಿತಾಂಶ ಕೊಟ್ಟಿದ್ದಾನೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಕೊಟ್ಟಿಲ್ಲ. ಒಟ್ಟು 82 ವಾರ್ಡ್​ಗಳಿಗೆ ಎಲೆಕ್ಷನ್​ ನಡೆದಿದ್ದು, 420 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಈಗಾಗಲೇ 82 ವಾರ್ಡ್​ಗಳ ಫಲಿತಾಂಶ ಪ್ರಕಟವಾಗಿದ್ದು, 39 ವಾರ್ಡ್​ಗಳಲ್ಲಿ ಬಿಜೆಪಿ, 33 ವಾರ್ಡ್​ಗಳಲ್ಲಿ ಕಾಂಗ್ರೆಸ್ ಹಾಗೂ 6 ವಾರ್ಡ್​ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು, ಎಐಎಂ 3 ಹಾಗೂ ಜೆಡಿಎಸ್​ 1 ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದೆ.

ಇದನ್ನೂ ಓದಿ:ಇದೇ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ ಕುಂದಾನಗರಿ.. ಕಾಂಗ್ರೆಸ್, ಎಂಇಎಸ್ ಧೂಳೀಪಟ

ಈ ಬಾರಿ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಗಳಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಅಧಿಕಾರಕ್ಕೆ ಬರಲು ಇತರರ ನೆರವು ಬೇಕೇ ಬೇಕು. ಕಾಂಗ್ರೆಸ್​ ಕಮಲ ಪಕ್ಷಕ್ಕೆ ಸಮಬಲದ ಪೈಪೋಟಿ ನೀಡಿದ್ದು, 33 ವಾರ್ಡ್​ಗಳಲ್ಲಿ ಗೆಲುವಿನ ನಗೆ ಬೀರಿದೆ.

ವಿಧಾನಸಭಾ ಕ್ಷೇತ್ರವಾರು ಪಕ್ಷಗಳ ಬಲಾಬಲ:

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ - ಶಾಸಕ ಜಗದೀಶ್ ಶೆಟ್ಟರ್

ಬಿಜೆಪಿ - 14

ಕಾಂಗ್ರೆಸ್ - 8

ಪಕ್ಷೇತರ -3

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ - ಶಾಸಕ ಅಮೃತ ದೇಸಾಯಿ

ಬಿಜೆಪಿ- 5

ಕಾಂಗ್ರೆಸ್ - 4

ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರ - ಶಾಸಕ ಅರವಿಂದ ಬೆಲ್ಲದ

ಬಿಜೆಪಿ - 13

ಕಾಂಗ್ರೆಸ್ - 10

ಜೆಡಿಎಸ್ - 1

ಪಕ್ಷೇತರರು - 1

ಹು-ಧಾ ಪೂರ್ವ -ಕಾಂಗ್ರೆಸ್ - ಶಾಸಕ ಅಬ್ಬಯ್ಯ

ಬಿಜೆಪಿ - 7

ಕಾಂಗ್ರೆಸ್ - 11

ಎಐಎಂಐಎಂ - 3

ಪಕ್ಷೇತರ - 2

ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಗೆದ್ದವರ ವಿವರ ಇಂತಿದೆ:

  1. ಬಿಜೆಪಿ- ಅನಿತಾ ಚಳಗೇರಿ
  2. ಕಾಂಗ್ರೆಸ್ - ಸುರವ್ವ ಪಾಟೀಲ
  3. ಬಿಜೆಪಿ - ಈರೇಶ ಅಂಚಟಗೇರಿ
  4. ಕಾಂಗ್ರೆಸ್- ರಾಜಶೇಖರ
  5. ಬಿಜೆಪಿ- ನಿತಿನ್ ಇಂಡಿ
  6. ಕಾಂಗ್ರೆಸ್ - ದಿಲ್ಶಾದ್ ಬೇಗಂ ನದಾಫ್
  7. ಕಾಂಗ್ರೆಸ್ - ದೀಪಾ ನೀರಲಕಟ್ಟಿ
  8. ಬಿಜೆಪಿ - ಶಂಕರ ಶೆಳಕೆ
  9. ಬಿಜೆಪಿ - ರತ್ನಾಬಾಯಿ ನಾಜರೆ
  10. ಬಿಜೆಪಿ - ಚಂದ್ರಕಲಾ ಕೊಟಬಾಗಿ
  11. ಬಿಜೆಪಿ - ಮಂಜುನಾಥ ಬಟ್ಟೆಣ್ಣವರ
  12. ಬಿಜೆಪಿ - ವಿಜಯಾನಂದ ಶಟ್ಟಿ
  13. ಬಿಜೆಪಿ - ಸುರೇಶ ಬೆದರೆ
  14. ಕಾಂಗ್ರೆಸ್ - ಶಂಭುಗೌಡ ಸಾಲ್ಮನಿ
  15. ಬಿಜೆಪಿ - ವಿಷ್ಣುತೀರ್ಥ ಕೊರ್ಲಹಳ್ಳಿ
  16. ಕಾಂಗ್ರೆಸ್ - ಪರವಿನ್ ದೇಸಾಯಿ
  17. ಕಾಂಗ್ರೆಸ್ - ಗಣೇಶ ಮುಧೋಳ
  18. ಬಿಜೆಪಿ - ಶಿವು ಹಿರೇಮಠ
  19. ಬಿಜೆಪಿ - ಜ್ಯೋತಿ ಪಾಟೀಲ್
  20. ಕಾಂಗ್ರೆಸ್ - ಕವಿತಾ ಕಬ್ಬೇರ
  21. ಬಿಜೆಪಿ - ಆನಂದ ಯಾವಗಲ್
  22. ಕಾಂಗ್ರೆಸ್ - ಬಿಲಕಿಸ ಬಾನು ಮುಲ್ಲಾ
  23. ಕಾಂಗ್ರೆಸ್ - ಮಂಜುನಾಥ ಬಡಕುರಿ
  24. ಕಾಂಗ್ರೆಸ್ - ಡಾ. ಮಯೂರ ಮೋರೆ
  25. ಜೆಡಿಎಸ್ - ಲಕ್ಷ್ಮೀ ಹಿಂಡಸಗೇರಿ
  26. ಬಿಜೆಪಿ - ನೀಲವ್ವ ಅರವಳದ
  27. ಬಿಜೆಪಿ - ಸುನಿತಾ ಮಾಳವದಕರ್
  28. ಬಿಜೆಪಿ - ಚಂದ್ರಶೇಖರ ಮನಗುಂಡಿ
  29. ಪಕ್ಷೇತರ - ಮಂಜುನಾಥ ಬುರ್ಲಿ
  30. ಬಿಜೆಪಿ - ರಾಮಣ್ಣ ಬಡಿಗೇರ
  31. ಕಾಂಗ್ರೆಸ್ - ಶಂಕ್ರಪ್ಪ ಹರಿಜನ್
  32. ಬಿಜೆಪಿ - ಸತಿಶ ಹಾನಗಲ್
  33. ಕಾಂಗ್ರೆಸ್ - ಇಮ್ರಾನ್ ಎಲಿಗಾರ
  34. ಕಾಂಗ್ರೆಸ್ - ಮಂಗಳಾ ಗೌರಿ
  35. ಬಿಜೆಪಿ - ಮಲ್ಲಿಕಾರ್ಜುನ ಗುಂಡೂರ
  36. ಬಿಜೆಪಿ - ರಾಜಣ್ಣ ಕೊರವಿ
  37. ಬಿಜೆಪಿ - ಉಮೇಶಗೌಡ ಕೌಜಗೆರಿ
  38. ಬಿಜೆಪಿ - ತಿಪ್ಪಣ್ಣ ಮಜಗಿ
  39. ಬಿಜೆಪಿ - ಸೀಮಾ ಮೊಗಲಿಶೆಟ್ಟರ್
  40. ಕಾಂಗ್ರೆಸ್ - ಶಿವಕುಮಾರ ರಾಯನಗೌಡರ್
  41. ಬಿಜೆಪಿ - ಸಂತೋಷ ಚೌಹಾಣ
  42. ಬಿಜೆಪಿ - ಮಹಾದೇವಪ್ಪ ನರಗುಂದ
  43. ಬಿಜೆಪಿ - ಬೀರಪ್ಪ ಖಂಡೇಕರ್
  44. ಬಿಜೆಪಿ - ಉಮಾ ಮುಕ್ಕುಂದ
  45. ಕಾಂಗ್ರೆಸ್ - ಪ್ರಕಾಶ ಕುರಟ್ಟಿ
  46. ಬಿಜೆಪಿ- ವೀರಣ್ಣ ಸವಡಿ
  47. ಬಿಜೆಪಿ - ರೂಪಾ ಶೆಟ್ಟಿ
  48. ಪಕ್ಷೇತರ - ಕಿಶನ್ ಬೆಳಗಾವಿ
  49. ಬಿಜೆಪಿ - ವೀಣಾ ಬಾರದ್ವಾಡ್
  50. ಕಾಂಗ್ರೆಸ್ - ಮಂಗಳಮ್ಮ ಹಿರೇಮನಿ
  51. ಕಾಂಗ್ರೆಸ್ - ಸಂದಿಲ್ ಕುಮಾರ್
  52. ಪಕ್ಷೇತರ - ಚೇತನ್ ಹಿರೇಕೆರೂರದ
  53. ಕಾಂಗ್ರೆಸ್ - ಮಹ್ಮದ ಇಸ್ಮಾಯಿಲ್ ಭದ್ರಾಪೂರ
  54. ಬಿಜೆಪಿ - ಸರಸ್ವತಿ ಧೊಂಗಡಿ
  55. ಕಾಂಗ್ರೆಸ್ - ಇಕ್ಬಾಲ್ ನವಲೂರು
  56. ಪಕ್ಷೇತರ - ಚಂದ್ರಿಕಾ ಮೇಸ್ತ್ರಿ
  57. ಬಿಜೆಪಿ - ಮೀನಾಕ್ಷಿ ವಂಟಮೂರಿ
  58. ಕಾಂಗ್ರೆಸ್ - ಶೃತಿ ಚಲವಾದಿ
  59. ಕಾಂಗ್ರೆಸ್ - ಸುವರ್ಣ
  60. ಬಿಜೆಪಿ - ರಾಧಾಬಾಯಿ, ಸಪಾರೆ
  61. ಕಾಂಗ್ರೆಸ್ - ದೊರರಾಜ ಮನಿಕುಂಟ್ಲ
  62. ಕಾಂಗ್ರೆಸ್ - ಸರ್ತಾಜ್ ಅದ್ವಾನಿ
  63. ಕಾಂಗ್ರೆಸ್ - ಮಹ್ಮದ ಇಲಾಯಾಸ್
  64. ಬಿಜೆಪಿ - ಪೂಜಾ ಶೇಜವಾಡ್ಕರ್
  65. ಕಾಂಗ್ರೆಸ್ - ಸುನಿತಾ ಬುರಬುರೆ
  66. ಬಿಜೆಪಿ - ಪ್ರೀತಿ ಖೋಡೆ
  67. ಬಿಜೆಪಿ - ಶಿವಾನಂದ ಮೆಣಸಿನಕಾಯಿ
  68. ಕಾಂಗ್ರೆಸ್ - ನಿರಂಜನಯ್ಯ
  69. ಪಕ್ಷೇತರ - ದುರ್ಗಮ್ಮ ಬಿಜವಾಡ
  70. ಕಾಂಗ್ರೆಸ್ - ಗೀತಾ ಹೊಸಮನಿ
  71. ಎಐಎಂಐಎಂ - ನಜೀರ್ ಅಹ್ಮದ್ ಹೊನ್ಯಾಳ
  72. ಬಿಜೆಪಿ - ಸುಮಿತ್ರಾ ಗುಂಜಾಳ
  73. ಬಿಜೆಪಿ - ಶೀಲಾ ಕಾಟಕರ್
  74. ಕಾಂಗ್ರೆಸ್ - ಬೀಬಿ ಮರಿಯಮ್ಮ ಮುಲ್ಲಾ
  75. ಕಾಂಗ್ರೆಸ್ - ಮುಸ್ತಾಕ್ ಅಹ್ಮದ ಮನ್ಸೂರು
  76. ಎಐಎಂಐಎಂ - ವಹಿದಾಖಾನಂ ಕಿತ್ತೂರು
  77. ಎಐಎಂಐಎಂ - ಹುಸೇನ ಬೀ
  78. ಕಾಂಗ್ರೆಸ್ - ಶಿವಗಂಗಾ ಮಾಶೆಟ್ಟರ್
  79. ಕಾಂಗ್ರೆಸ್ - ಫಮಿದಾ ಕಾರಡಗಿ
  80. ಬಿಜೆಪಿ - ಶಾಂತಾ ಹಿರೇಮಠ
  81. ಕಾಂಗ್ರೆಸ್ - ಮಂಜುಳಾ ಶಾಮ ಜಾಧವ
  82. ಪಕ್ಷೇತರ - ಅಕ್ಷತಾ ಅಸುಂಡಿ
Last Updated : Sep 6, 2021, 3:09 PM IST

ABOUT THE AUTHOR

...view details