ಹುಬ್ಬಳ್ಳಿ: ಇಂದು ಪ್ರಧಾನಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬ. ಇದರ ಅಂಗವಾಗಿ ಅವರ ಭಾವಚಿತ್ರವನ್ನು ಅರ್ಕಾಲಿಕ್ ಪೇಂಟಿಂಗ್ ಮಾಡುವುದರ ಮೂಲಕ ಹುಬ್ಬಳ್ಳಿಯ ಉಜ್ವಲ್ ನರಗುಂದ ಎಂಬ ಅಭಿಮಾನಿ ಗಮನ ಸೆಳೆದಿದ್ದಾನೆ.
ಪಿಎಂ ಮೋದಿಯವರ ಅರ್ಕಾಲಿಕ್ ಪೇಂಟಿಂಗ್ ಮಾಡಿ ತಲುಪಿಸಿದ ಹುಬ್ಬಳ್ಳಿ ಕಲಾವಿದ - Hubballi artist given gift
70ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿಯವರಿಗೆ ಹುಬ್ಬಳ್ಳಿಯ ಚಿತ್ರಕಲಾವಿದನೊಬ್ಬ ಅವರ ಭಾವಚಿತ್ರವನ್ನು ಪೇಂಟಿಂಗ್ ಮಾಡಿ ಕಳುಹಿಸುವ ಮೂಲಕ ಅಭಿಮಾನ ತೋರಿದ್ದಾರೆ.
ಮೋದಿ ಭಾವಚಿತ್ರ ಆರ್ಟ್ ಮಾಡಿ ಉಡುಗೊರೆ ನೀಡಿದ ಹುಬ್ಬಳ್ಳಿಯ ಚಿತ್ರ ಕಲಾವಿದ
ಇವರು ಮಾಡಿರುವ ಈ ಪೇಂಟಿಂಗ್ನಲ್ಲಿ ಭೂಮಿತಾಯಿಯ ಮೇಲೆ ಭಾರತ ದೇಶದ ನಕ್ಷೆ ಇದೆ. ಅದರಲ್ಲಿ ಮೋದಿಜೀ ಅವರ ಭಾವಚಿತ್ರ ಅರಳಿದೆ. ಈ ಪೇಂಟಿಂಗ್ ಸ್ಥಳೀಯ ರಾಜಕೀಯ ಮುಖಂಡರ ಸಹಾಯದಿಂದ ಪ್ರಧಾನಿ ಮೋದಿಯವರಿಗೆ ತಲುಪಿಸುವ ಮೂಲಕ ಅಭಿಮಾನ ತೋರಿದ್ದಾರೆ.