ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ಒಡೆದಾಟ.. ದೃಶ್ಯ ಸಿಸಿಟಿವಿಯಲ್ಲಿ ಸೆರೆ - ರೌಡಿಗಳನ್ನು ಕರೆಸಿ ದಾಯಾದಿಗಳ ಹಲ್ಲೆ

ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎನ್ನೋ ಮಾತಿದೆ. ಅಂತಹುದೇ ಒಂದು ದಾಯಾದಿಗಳ ಕಲಹ ಹುಬ್ಬಳ್ಳಿಯಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದು ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗಲಾಟೆ ಎನ್ನಲಾಗಿದೆ.

ಸಿಸಿಟಿವಿಯಲ್ಲಿ ಸೆರೆ
ಸಿಸಿಟಿವಿಯಲ್ಲಿ ಸೆರೆ

By

Published : Dec 16, 2019, 10:24 PM IST

ಹುಬ್ಬಳ್ಳಿ:ಇಲ್ಲಿನ ಸಿದ್ದರಾಮೇಶ್ವರ ನಗರದ ಸಿದ್ದರಾಮಪ್ಪ ಶಿರುಗುಪ್ಪಿ ಕುಟುಂಬದ ಮೇಲೆ ಸ್ವಂತ ಅಣ್ಣನ ಮಗ ಮಂಜುನಾಥ ಶಿರಗುಪ್ಪಿ ಎಂಬಾತ ರೌಡಿಗಳನ್ನು ಕರೆಸಿ ಹಲ್ಲೆ ನಡೆಸಿದ್ದಾನೆ. ಈ ಎಲ್ಲಾ ದೃಶ್ಯ ಸಿಸಿಟಿವಿಲ್ಲಿ ಸೆರೆಯಾಗಿವೆ.

ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ಬಡಿದಾಟ..

ಘಟನೆ ಹಿನ್ನೆಲೆ:ಹಲ್ಲೆಗೊಳಗಾದ ಸಿದ್ದರಾಮಪ್ಪ ಶಿರಗುಪ್ಪಿ ಎಲೆಕ್ಟ್ರಿಕಲ್ ಕೆಲಸದ ನಿಮಿತ್ಯ ಮನೆಯ ವಿದ್ಯುತ್ ಸ್ಥಗಿತಗೊಳಿಸಿದ್ದರಂತೆ. ಇದರಿಂದ ಕುಪಿತಗೊಂಡ ಮಂಜುನಾಥ ಶಿರಗುಪ್ಪಿ ಅಂದು ರಾತ್ರಿ ಎಂಟು ಗಂಟೆ ಸುಮಾರಿಗೆ ನಾಲ್ಕೈದು ಜನ ಪುಡಿರೌಡಿಗಳೊಂದಿಗೆ ಆಗಮಿಸಿ ಏಕಾಏಕಿ ತನ್ನ ಚಿಕ್ಕಪ್ಪನ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಹೆಣ್ಣು ಮಕ್ಕಳು ಅನ್ನೋದನ್ನ ಕೂಡ ನೋಡದೆ ರಾಡ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಸಂತ್ರಸ್ತ ಕುಟುಂಬ ತಿಳಿಸಿದೆ.

ಸದ್ಯ ಸಿದ್ದರಾಮಪ್ಪ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಮಂಜುನಾಥ ಸಿರುಗುಪ್ಪ ಸೇರಿ ಎಂಟು ಜನರ ವಿರುದ್ಧ ದೂರು ದಾಖಲಿಸಿದ್ದು, ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ABOUT THE AUTHOR

...view details